AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ತರುಣ್​-ಸೋನಲ್​ ಮದುವೆಯಿಂದ ಜನರು ಜಾತಿ ಸಾಮರಸ್ಯ ಕಲಿಯಬೇಕು’: ಸಂಜನಾ ಗಲ್ರಾನಿ

‘ತರುಣ್​-ಸೋನಲ್​ ಮದುವೆಯಿಂದ ಜನರು ಜಾತಿ ಸಾಮರಸ್ಯ ಕಲಿಯಬೇಕು’: ಸಂಜನಾ ಗಲ್ರಾನಿ

ಮದನ್​ ಕುಮಾರ್​
|

Updated on:Aug 10, 2024 | 11:22 PM

Share

ನಟಿ ಸೋನಲ್​ ಮಾಂತೆರೋ ಮತ್ತು ನಿರ್ದೇಶಕ ತರುಣ್​ ಸುಧೀರ್​ ಅವರ ವೆಡ್ಡಿಂಗ್​ ರಿಸೆಪ್ಷನ್​ ಬೆಂಗಳೂರಿನಲ್ಲಿ ಸಡಗರದಿಂದ ನಡೆದಿದೆ. ಇದರಲ್ಲಿ ನಟಿ ಸಂಜನಾ ಗಲ್ರಾನಿ ಕೂಡ ಭಾಗಿ ಆಗಿದ್ದಾರೆ. ಅಂತರ್​ಧರ್ಮೀಯ ವಿವಾಹ ಆಗುತ್ತಿರುವ ತರುಣ್​-ಸೋನಲ್​ ಅವರಿಂದ ಜನರು ಸಾಮರಸ್ಯದ ಪಾಠ ಕಲಿಯಬೇಕು ಎಂದು ಸಂಜನಾ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನ ಮೈಸೂರು ರಸ್ತೆಯಲ್ಲಿ ಇರುವ ಪೂರ್ಣಿಮಾ ಪ್ಯಾಲೇಸ್​ನಲ್ಲಿ ತರುಣ್​ ಸುಧೀರ್​ ಮತ್ತು ಸೋನಲ್​ ಮಾಂತೆರೋ ಅವರ ಆರತಕ್ಷತೆ ಸಮಾರಂಭ ಜರುಗಿದೆ. ಅನೇಕ ಸೆಲೆಬ್ರಿಟಿಗಳು ಬಂದು ಆಶೀರ್ವಾದ ಮಾಡಿದ್ದಾರೆ. ನಟಿ ಸಂಜನಾ ಗಲ್ರಾನಿ ಅವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಎದುರು ಈ ಮದುವೆಯ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಇದು ಸಂಭ್ರಮದ ಕ್ಷಣ. ಜಾತಿ ಭೇದ ನೋಡದೇ ಇಬ್ಬರ ಮನಸ್ಸು, ಕುಟುಂಬ ಒಂದಾಗಿದೆ. ಜಾತಿ ಭೇದ-ಭಾವ ಇಲ್ಲದೇ ನಾವು ಒಂದಾಗಿ ಇರಬೇಕು ಎಂಬುದನ್ನು ಕರ್ನಾಟಕದಲ್ಲಿ ನಾವು ಕಲಿಯಬೇಕು. ಇಂಥ ಮಿಲನದ ಜೊತೆಯೇ ನಾವು ಬದುಕಬೇಕು’ ಎಂದು ಸಂಜನಾ ಗಲ್ರಾನಿ ಹೇಳಿದ್ದಾರೆ. ಆ ವಿಡಿಯೋ ಇಲ್ಲಿದೆ..

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Aug 10, 2024 11:05 PM

Follow Us
Madan Kumar
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More