ಆಗ ವೀರಪ್ಪನ್ ಕೇಸ್‌ನಲ್ಲಿ ಗಿಫ್ಟ್: ಹೆಚ್ಡಿ ಕುಮಾರಸ್ವಾಮಿ ಹೊಸ ಬಾಂಬ್
ಹಾಸನ ಜೆಡಿಎಸ್ ಸಮಾವೇಶದಲ್ಲಿ ಎಚ್.ಡಿ. ಕುಮಾರಸ್ವಾಮಿ ದೇವೇಗೌಡರ ರೈತಪರ ಯೋಜನೆಗಳು ಮತ್ತು ನೀರಾವರಿ ಕೊಡುಗೆಗಳನ್ನು ಸ್ಮರಿಸಿದರು. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷೆಗಿಂತ ದೇವೇಗೌಡರ ಕನಸು ಮುಖ್ಯ ಎಂದರು. ವೀರಪ್ಪನ್ ಪ್ರಕರಣದಲ್ಲಿ ಪೊಲೀಸರಿಗೆ 30 ಲಕ್ಷ ರೂಪಾಯಿ ವರ್ಗಾವಣೆ ಕುರಿತು ನೋವು ವ್ಯಕ್ತಪಡಿಸಿ, ತನಿಖಾ ವಿಧಾನಗಳನ್ನು ಪ್ರಶ್ನಿಸಿ ಕಾಂಗ್ರೆಸ್‌ಗೆ ಸವಾಲೆಸೆದರು.
ಹಾಸನ, ಜನವರಿ 24: ವೀರಪ್ಪನ್ ಹಿಡಿಯಲು ಹೋಗಿದ್ದ ಪೊಲೀಸರಿಗೆ ರಾಜ್ಯದ ಇತಿಹಾಸದಲ್ಲಿ ದೇವೇಗೌಡರು ಉಡುಗೊರೆ ಕೊಟ್ಟಿದ್ದರು. ಆದರೆ ಇದೀಗ ಯಾವುದೋ ಅಧಿಕಾರಿಗಳಿಗೆ 30 ಲಕ್ಷ ರೂ ಉಡುಗೊರೆ ಕೊಟ್ಟಿದ್ದಾರೆ. ಆ ಮೂಲಕ ಪ್ರಜ್ವಲ್ ರೇವಣ್ಣಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ಎಸ್ಐಟಿ ಅಧಿಕಾರಿಗಳಿಗೆ ನೀಡಿರುವ ಬಹುಮಾನದ ಬಗ್ಗೆ ಪರೋಕ್ಷವಾಗಿ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದ್ದಾರೆ. ಹಾಸನದ JDS ಸಮಾವೇಶದಲ್ಲಿ ಮಾತನಾಡಿದ ಅವರು, ಸರ್ಕಾರದ ಅಧಿಕಾರಿಗಳನ್ನ ದುರುಪಯೋಗ ಮಾಡಿಕೊಳ್ಳಬೇಕು ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
