Assembly Polls: ಪಕ್ಷಕ್ಕೆ ತಲೆನೋವಾಗಿ ಪರಿಣಮಿಸುತ್ತಿರುವ ಹೆಚ್ ಡಿ ರೇವಣ್ಣ ವರಿಷ್ಠರಿಗೆ ಎದುರು ಮೂರು ಬೇಡಿಕೆಗಳನ್ನಿಟ್ಟಿದ್ದಾರೆ!
ರೇವಣ್ಣ ಮತ್ತು ಅವರ ಕುಟುಂಬ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸುತ್ತಿರುವುದು ದಿನೇದಿನೆ ಸ್ಪಷ್ಟವಾಗುತ್ತಿದೆ.
ಬೆಂಗಳೂರು: ಒಂದೆಡೆ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ತಯಾರಿಸುವಲ್ಲಿ ಮಗ್ನರಾಗಿದ್ದರೆ ಮತ್ತೊಂದೆಡೆ ಅವರ ಸಹೋದರ ಹೆಚ್ ಡಿ ರೇವಣ್ಣ (HD Revanna) 3 ಬೇಡಿಕೆಗಳನ್ನು ವರಿಷ್ಠರ ಮುಂದಿಟ್ಟಿದ್ದಾರೆ. ಅವರ ಮೊದಲ ಬೇಡಿಕೆ ಹೊಳೆನರಸೀಪುರದಿಂದ ಪತ್ನಿ ಭವಾನಿ ರೇವಣ್ಣಗೆ (Bhavani Revanna) ಟಿಕೆಟ್ ನೀಡಬೇಕು, ಎರಡನೇ ಡಿಮ್ಯಾಂಡ್ ಹಾಸನದಿಂದ ಸ್ವರೂಪ್ ಗೆ ಟಿಕೆಟ್ ನೀಡಬೇಕು ಮತ್ತು ಮೂರನೇಯದ್ದು ಖುದ್ದು ಅವರಿಗೆ ಕೆಆರ್ ಪೇಟೆಯಿಂದ ಸ್ಪರ್ಧಿಸಲು ಅವಕಾಶ ನೀಡಬೇಕು. ರೇವಣ್ಣ ಮತ್ತು ಅವರ ಕುಟುಂಬ ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸುತ್ತಿರುವುದು ದಿನೇದಿನೆ ಸ್ಪಷ್ಟವಾಗುತ್ತಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ