ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ ಬಳಿಕ ಹೆಚ್ ಡಿ ರೇವಣ್ಣ ನೇರವಾಗಿ ತಂದೆಯ ಮನೆಗೆ ಹೋದರು!

ಅರುಣ್​ ಕುಮಾರ್​ ಬೆಳ್ಳಿ

Updated on: May 31, 2024 | 1:56 PM

ಬಂಧನವಾಗುವ ಮೊದಲು ಅವರು ಹೆಚ್ ಡಿ ದೇವೇಗೌಡರ ಮನೆಯಲ್ಲಿದ್ದರು, ಜೈಲಿಂದ ಬಿಡುಗಡೆ ಹೊಂದಿದ ಬಳಿಕ ನೇರವಾಗಿ ದೊಡ್ಡಗೌಡರ ಮನೆಗೆ ಹೋಗಿದ್ದರು ಮತ್ತು ಇವತ್ತು ಮಗ ವಾಪಸ್ಸು ಬಂದಿರುವ ಹಿನ್ನೆಲೆಯಲ್ಲಿ ಅವರು ಜೆಪಿ ನಗರದಲ್ಲಿರುವ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ತಂದೆಯ ಮನೆಗೆ ಆಗಮಿಸಿದರು.

ಬೆಂಗಳೂರು: ಮಾನವನ ಸ್ವಭಾವವೇ ಹಾಗೆ, ಕಷ್ಟಬಂದಾಗ ದೇವರ ಮೊರೆ ಹೋಗುತ್ತಾನೆ. ಭಾರತೀಯರೆಲ್ಲ ಧಾರ್ಮಿಕ ಮನೋಭಾವದವರು. ವಿಚಾರವಾದಿ, ನಾಸ್ತಿಕ ಎಂದು ಹೇಳಿಕೊಳ್ಳುವ ಜನ ಸಹ ಒಂದಿಲ್ಲೊಂದು ಸಂದರ್ಭದಲ್ಲಿ ದೇವರನ್ನು ನೆನೆಯುತ್ತಾರೆ. ಹೆಚ್ ಡಿ ರೇವಣ್ಣ (HD Revanna) ವಿಷಯದಲ್ಲಿ ಇದನ್ನೆಲ್ಲ ಹೇಳಬೇಕಾಗಿದೆ. ಅವರು ಪರಮ ದೈವಭಕ್ತರೆಂದು ಕನ್ನಡಿಗರಿಗೆಲ್ಲ ಗೊತ್ತು. ಅವರಿಗೀಗ ಸಂಕಷ್ಟಗಳ ಸರಮಾಲೆ ಎದುರಾಗಿದೆ. ನಿನ್ನೆ ರಾತ್ರಿ ಅವರ ಮಗ ಮತ್ತು ಸಂಸದ ಪ್ರಜ್ವಲ್ ರೇವಣ್ಣ (Prajwal Revanna) ಸ್ವದೇಶಕ್ಕೆ ವಾಪಸ್ಸಾಗಿದ್ದಾರೆ ಮತ್ತು ಅವರನ್ನು ಎಸ್ಐಟಿ (SIT) ವಶಕ್ಕೆ ಪಡೆದುಕೊಂಡಿದೆ. ನಾವು ಆಗಲೇ ವರದಿ ಮಾಡಿದ ಹಾಗೆ, ಇವತ್ತು ಬೆಳಗ್ಗೆಯಿಂದ ರೇವಣ್ಣ ದೇವಸ್ಥಾನಗಳಿಗೆ ಹೋಗಿ ಪೂಜೆ ಸಲ್ಲಿಸುತ್ತಿದ್ದಾರೆ. ಕಷ್ಟ ಬಂದಾಗ ಜನ ದೇವರನ್ನು ಪ್ರಾರ್ಥಿಸಿಕೊಳ್ಳುವುದರ ಜೊತೆಗೆ, ತಮಗೆ ಅತ್ಯಂತ ಆಪ್ತರಾದವರ ಜೊತೆ ಕಷ್ಟವನ್ನು ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ. ರೇವಣ್ಣ ತಮ್ಮ ತಂದೆಯಲ್ಲಿ ಅಂಥ ಒಬ್ಬ ವ್ಯಕ್ತಿಯನ್ನು ಕಂಡುಕೊಂಡಿದ್ದಾರೆ. ಬಂಧನವಾಗುವ ಮೊದಲು ಅವರು ಹೆಚ್ ಡಿ ದೇವೇಗೌಡರ (HD Devegowda) ಮನೆಯಲ್ಲಿದ್ದರು, ಜೈಲಿಂದ ಬಿಡುಗಡೆ ಹೊಂದಿದ ಬಳಿಕ ನೇರವಾಗಿ ದೊಡ್ಡಗೌಡರ ಮನೆಗೆ ಹೋಗಿದ್ದರು ಮತ್ತು ಇವತ್ತು ಮಗ ವಾಪಸ್ಸು ಬಂದಿರುವ ಹಿನ್ನೆಲೆಯಲ್ಲಿ ಅವರು ಜೆಪಿ ನಗರದಲ್ಲಿರುವ ಕೆಲ ದೇವಸ್ಥಾನಗಳಿಗೆ ಭೇಟಿ ನೀಡಿದ ಬಳಿಕ ತಂದೆಯ ಮನೆಗೆ ಆಗಮಿಸಿದರು. ಅವರೊಂದಿಗೆ ಮಾತಾಡುತ್ತಾ ಅವರು ಮನಸ್ಸಿಗೆ ಸಮಾಧಾನ ತಂದುಕೊಳ್ಳುವಂತಿದೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ನನ್ನ ಕುಟುಂಬವೇ ಬೇರೆ, ಹೆಚ್ ಡಿ ರೇವಣ್ಣ ಕುಟುಂಬವೇ ಬೇರೆ, ನಮ್ಮ ವ್ಯವಹಾರಗಳೂ ಬೇರೆ ಬೇರೆ: ಹೆಚ್ ಡಿ ಕುಮಾರಸ್ವಾಮಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.