ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸಿ 1.4 ಲಕ್ಷ ರೂ. ಗೆದ್ದ ಯುವಕ‌‌: ಕೇಸ್ ಹಾಕಿದ ಪೊಲೀಸ್​

ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸಿ 1.4 ಲಕ್ಷ ರೂ. ಗೆದ್ದ ಯುವಕ‌‌: ಕೇಸ್ ಹಾಕಿದ ಪೊಲೀಸ್​

ಅಮೀನ್​ ಸಾಬ್​
| Updated By: ಗಂಗಾಧರ​ ಬ. ಸಾಬೋಜಿ

Updated on:Aug 25, 2023 | 8:30 PM

ನಾಗರಪಂಚಮಿ ಹಬ್ಬದ ದಿನ ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸುವ  ಮೂಲಕ ಯುವಕನೋರ್ವ 1.4 ಲಕ್ಷ ರೂ. ಬೆಟ್ಟು ಗೆದಿದ್ದ. ಆದರೆ ಯುವಕನ ಈ ಸಾಹಸಕ್ಕೆ ವಡಗೇರ ಠಾಣೆಯ ಪೊಲೀಸರು 279, 336 ಐಪಿಸಿ ಅಡಿ ಕೇಸ್ ದಾಖಲಿಸಿಕೊಂಡಿದ್ದಾರೆ.

ಯಾದಗಿರಿ, ಆಗಸ್ಟ್​ 25: ನಾಗರಪಂಚಮಿ ಹಬ್ಬದ ದಿನ ಹೆದ್ದಾರಿಯಲ್ಲಿ ಹಿಮ್ಮುಖವಾಗಿ ಟ್ರ್ಯಾಕ್ಟರ್ (tractor) ಓಡಿಸುವ  ಮೂಲಕ ಯುವಕನೋರ್ವ 1.4 ಲಕ್ಷ ರೂ. ಬೆಟ್ಟು ಗೆದಿದ್ದ. ಆದರೆ ಯುವಕನ ಈ ಸಾಹಸಕ್ಕೆ ವಡಗೇರ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಯಾದಗಿರಿಯ ಶಹಾಪುರ‌ ತಾಲೂಕಿನ ದೋರನಹಳ್ಳಿ ಗ್ರಾಮದ ಬಸಲಿಂಗಪ್ಪ ಕೇಸ್ ಹಾಕಿಸಿಕೊಂಡ ಯುವಕ.‌ ದೋರನಹಳ್ಳಿಯಿಂದ ಯಾದಗಿರಿವರೆಗೆ ಹಿಮ್ಮುಖವಾಗಿ ಟ್ರ್ಯಾಕ್ಟರ್ ಓಡಿಸಿದ್ದ. ವೈರಲ್ ಆದ ವಿಡಿಯೋವನ್ನು ನೋಡಿದ ಪೊಲೀಸರು 279, 336 ಐಪಿಸಿ ಅಡಿ ಕೇಸ್ ದಾಖಲಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 25, 2023 08:28 PM