Head Bush: ‘ಇನ್ಮೇಲೆ ವರ್ಷಕ್ಕೆ ಇಷ್ಟು ಚಿತ್ರ ಮಾಡಲ್ಲ’: ‘ಹೆಡ್ ಬುಷ್’ ಬಳಿಕ ಡಾಲಿ ಧನಂಜಯ್ ನಿರ್ಧಾರ
Daali Dhananjay: ಲಾಕ್ ಡೌನ್ ಬಳಿಕ ಧನಂಜಯ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸಿದರು. ಆದರೆ ಇನ್ಮುಂದೆ ಅವರ ಪ್ಲ್ಯಾನ್ ಬದಲಾಗಲಿದೆ.
ಹಲವು ಬಗೆಯ ಪಾತ್ರಗಳನ್ನು ಮಾಡಿ ನಟ ಡಾಲಿ ಧನಂಜಯ್ (Daali Dhananjay) ಅವರು ಸೈ ಎನಿಸಿಕೊಂಡಿದ್ದಾರೆ. ಅವರು ಅಭಿನಯಿಸಿದ ‘ಹೆಡ್ ಬುಷ್’ (Head Bush) ಸಿನಿಮಾ ಈಗ ತೆರೆಕಂಡು ಉತ್ತಮ ಪ್ರದರ್ಶನ ಕಾಣುತ್ತಿದೆ. ಇದರ ಸುತ್ತ ಕೆಲವು ವಿವಾದಗಳು ಕೂಡ ತಲೆ ಎತ್ತಿವೆ. ಲಾಕ್ ಡೌನ್ ಬಳಿಕ ಧನಂಜಯ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಂಡು ನಟಿಸಿದರು. ಅದಕ್ಕೆ ಬೇರೆ ಬೇರೆ ಕಾರಣಗಳು ಇದ್ದವು. ಇನ್ಮುಂದೆ ವರ್ಷಕ್ಕೆ ಇಷ್ಟೊಂದು ಸಿನಿಮಾ ಮಾಡುವುದಿಲ್ಲ ಎಂದು ಧನಂಜಯ್ ತಿಳಿಸಿದ್ದಾರೆ.
Published on: Oct 26, 2022 06:48 PM