Head Bush: ‘ಮದುವೆಯಿಂದ ನನ್ನ ಜೀವನದಲ್ಲಿ ಏನೂ ಬದಲಾಗಿಲ್ಲ’; ಶ್ರುತಿ ಹರಿಹರನ್
Sruthi Hariharan: ‘ಹೆಡ್ ಬುಷ್’ ಚಿತ್ರದಲ್ಲಿ ಶ್ರುತಿ ಹರಿಹರನ್ ನಟಿಸಿದ್ದಾರೆ. ಮದುವೆ ಬಳಿಕ ಅವರು ಹಲವು ಸಿನಿಮಾಗಳನ್ನು ಒಪ್ಪಿಕೊಂಡು ಅಭಿನಯಿಸುತ್ತಿದ್ದಾರೆ.
ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಚಿಕ್ಕ ಗ್ಯಾಪ್ ಬಳಿಕ ಮತ್ತೆ ಬಂದಿದ್ದಾರೆ. ಅನೇಕ ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಡಾಲಿ ಧನಂಜಯ್ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಹೆಡ್ ಬುಷ್’ (Head Bush) ಚಿತ್ರದಲ್ಲಿ ಶ್ರುತಿ ಹರಿಹರನ್ ಅವರು ನಟಿಸಿದ್ದಾರೆ. ಮದುವೆ ಬಳಿಕ ಕೆಲವು ನಟಿಯರು ತೆರೆಮರೆಗೆ ಸರಿಯುತ್ತಾರೆ. ಆದರೆ ಶ್ರುತಿ ಹರಿಹರನ್ ಹಾಗಲ್ಲ. ಮದುವೆಯು ತಮ್ಮ ವೃತ್ತಿಜೀವನದ ಮೇಲೆ ಏನೂ ಪರಿಣಾಮ ಬೀರಿಲ್ಲ ಎಂದು ಅವರು ಹೇಳಿದ್ದಾರೆ. ‘ಮದುವೆ ನಂತರ ನನ್ನ ಜೀವನದಲ್ಲಿ ಏನೂ ಬದಲಾಗಿಲ್ಲ. ಪತಿ ರಾಮ್ ಅವರು ಲೂಸಿಯಾಗಿಂತ ಮೊದಲೇ ನನ್ನ ಜೀವನದ ಮುಖ್ಯ ಭಾಗ ಆಗಿದ್ದರು. ಮದುವೆ ಬಳಿಕವೂ ಅದು ಮುಂದುವರಿದಿದೆ. ಮಗು ಜನಿಸಿದ ಬಳಿಕ ಜೀವನದಲ್ಲಿ ಬದಲಾವಣೆ ಆಯ್ತು. ಸಿನಿಮಾ ಮಾಡುವಾಗ ನನ್ನ ಅರ್ಧ ಮನಸ್ಸು ಮಗು ಕಡೆಗೆ ಇರುತ್ತದೆ’ ಎಂದು ಶ್ರುತಿ ಹರಿಹರನ್ ಹೇಳಿದ್ದಾರೆ.
Published on: Oct 12, 2022 02:50 PM
Latest Videos