ಊಟವಾದ ಮೇಲೆ ತಾಂಬೂಲ ಹಾಕಿಕೊಳ್ಳುವುದರ ಮಹತ್ವವೇನು?
ತಿಂದ ಆಹಾರ ಜೀರ್ಣ ಆಗಲು ಊಟದ ನಂತರ ತಾಂಬೂಲ ಸವಿಯುವ ಅಭ್ಯಾಸವಿದೆ. ಆದರೆ ವೀಳ್ಯೆದೆಲೆಯ ತಾಂಬೂಲ ಸೇವನೆ ಕೇವಲ ಅಜೀರ್ಣ ನಿವಾರಣೆಗಷ್ಟೇ ಸೀಮಿತವಾಗಿಲ್ಲ. ಈ ತಾಂಬೂಲ ಸೇವನೆಯ ಹಿಂದೆ ಅನೇಕ ಆರೋಗ್ಯಕ್ಕೆ ಪೂರಕವಾದ ಸಂಗತಿಗಳಿವೆ. ಈ ಬಗ್ಗೆ ಗುರೂಜಿ ವಿವರಿಸಿದ್ದಾರೆ.
ನಮ್ಮಲ್ಲಿ ಊಟವಾದ ಮೇಲೆ ಕಡ್ಡಾಯವಾಗಿ ಎಲೆ-ಅಡಿಕೆ ಹಾಕುವ ಸಂಪ್ರದಾಯವಿದೆ. ಈಗೆಲ್ಲ ಅನೇಕರು ಬೀಡದ ಮೊರೆ ಹೋಗಿದ್ದಾರೆ. ಆದರೆ ಈಗಲೂ ಕೆಲವು ಕಡೆ ಎಲೆ-ಅಡಿಕೆಯನ್ನು ತಿನ್ನುವ ಸಂಪ್ರದಾಯ ಮುಂದುವರಿದುಕೊಂಡು ಬಂದಿದೆ. ತಾಂಬೂಲವಾಗಲಿ, ಬೀಡ ಆಗಲಿ ಅದರಲ್ಲಿ ಕಾಯಂ ಆಗಿ, ಸಾಮಾನ್ಯವಾಗಿರುವ ವಸ್ತುಗಳೆಂದರೆ ಅದು ವೀಳ್ಯೆದೆಲೆ,ಅಡಿಕೆ,ಸುಣ್ಣ. ಆದರೆ ನಿಮಗೆ ಗೊತ್ತಾ ಊಟ ಆದ ಮೇಲೆ ತಾಂಬೂಲ ಹಾಕುವ ಮಹತ್ವ? ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ಬಗ್ಗೆ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ