Displays batting skills: ಆರೋಗ್ಯ ಸಚಿವ ಡಾ ಕೆ ಸುಧಾಕರ್ ಕೈಯಲ್ಲಿ ಸಿರಿಂಜ್ ಹಿಡಿಯುವ ಮೊದಲು ಕ್ರಿಕೆಟ್ ಬ್ಯಾಟ್ ಹಿಡಿದಿದ್ದರು!
ಒಂದು ಎಸೆತವನ್ನು ಮಿಡ್ ವಿಕೆಟ್ ಕಡೆ ಫ್ಲಿಕ್ ಮಾಡುತ್ತಾರೆ, ಮತ್ತೊಂದನ್ನು ಕವರ್ ಪಾಯಿಂಟ್ ಮೇಲಿಂದ ಎತ್ತಿ ಬಾರಿಸುತ್ತಾರೆ ಹಾಗೂ ಇನ್ನೊಂದನ್ನು ಲಾಂಗಾನ್ ಕಡೆ ಲಾಫ್ಟ್ ಮಾಡುತ್ತಾರೆ!
ಚಿಕ್ಕಬಳ್ಳಾಪುರ: ಆರೋಗ್ಯ ಸಚಿವ ಡಾ ಕೆ ಸುಧಾಕರ್ (Dr K Sudhakar) ನಿಸ್ಸಂದೇಹವಾಗಿ ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ಕ್ರಿಕೆಟ್ ಆಡಿದ್ದಾರೆ ಮಾರಾಯ್ರೇ. ಈ ವಿಡಿಯೋ ನೋಡಿದರೆ ನಿಮಗೆ ಅದು ವೇದ್ಯವಾಗುತ್ತದೆ. ನಗರದಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟೊಂದನ್ನು (Cricket tournament) ಉದ್ಘಾಟಿಸಿದ ಬಳಿಕ ಕೈಯಲ್ಲಿ ಬ್ಯಾಟ್ ಹಿಡಿದು ಒಂದಷ್ಟು ಎಸೆತಗಳನ್ನು ಎದುರಿಸಿದ ಸುಧಾಕರ್ ಒಬ್ಬ ನುರಿತ ಬ್ಯಾಟರ್ ನಂತೆ (batter) ಬಾಲ್ ಗಳನ್ನು ಕನೆಕ್ಟ್ ಮಾಡಿದರು. ಕ್ರಿಕೆಟ್ ಆಡದವರ ಕೈಯಲ್ಲಿ ಬ್ಯಾಟ್ ನೀಡಿದರೆ ಕಣ್ಣು ಮುಚ್ಚಿ ಅದನ್ನು ಬೀಸುತ್ತಾರೆ. ಚೆಂಡು ಒಂದೆಡೆ ಹೋಗುತ್ತಿದ್ದರೆ ಇವರ ಬ್ಯಾಟ್ ಮತ್ತೊಂದೆಡೆ! ಆದರೆ ಸಚಿವರು ಬಾಲ್ ಗೆ ಬ್ಯಾಟ್ ಕನೆಕ್ಟ್ ಮಾಡುವುದರ ಜೊತೆಗೆ ಕೆಲ ಪಕ್ಕಾ ಕ್ರಿಕೆಟಿಂಗ್ ಹೊಡೆತಗಳನ್ನು ಬಾರಿಸುತ್ತಾರೆ. ಒಂದು ಎಸೆತವನ್ನು ಮಿಡ್ ವಿಕೆಟ್ ಕಡೆ ಫ್ಲಿಕ್ ಮಾಡುತ್ತಾರೆ, ಮತ್ತೊಂದನ್ನು ಕವರ್ ಪಾಯಿಂಟ್ ಮೇಲಿಂದ ಎತ್ತಿ ಬಾರಿಸುತ್ತಾರೆ ಹಾಗೂ ಇನ್ನೊಂದನ್ನು ಲಾಂಗಾನ್ ಕಡೆ ಲಾಫ್ಟ್ ಮಾಡುತ್ತಾರೆ!
ವೆಲ್ ಪ್ಲೇಯ್ಡ್ ಸರ್!!
ಮತ್ತಷ್ಟು ವಿಡಿಯೋ ಸದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ