ಬೆಳಗಾವಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಮತ್ತೊಮ್ಮೆ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಹೆಚ್ಚು ಕಡಿಮೆ ಒಂದೂವರೆ ತಿಂಗಳಲ್ಲಿ ಪ್ರಧಾನಿ ಮೋದಿ ನಾಲ್ಕನೇ ಬಾರಿ ಕರ್ನಾಟಕಕ್ಕೆ (Karnataka) ಬರುತ್ತಿರುವುದು ಯಾಕೆ ಅಂತ ನಮಗೆಲ್ಲ ಗೊತ್ತಿರುವ ಸಂಗತಿಯೇ. ಮೊದಲು ಹುಬ್ಬಳ್ಳಿ-ಧಾರವಾಡ, ಅಮೇಲೆ ಯಾದಗಿರಿ-ಕಲಬುರಗಿ, ನಂತರ ತುಮಕೂರು ಮತ್ತು ಈಗ ಸಿಹಿತಿಂಡಿ ಕುಂದಾಗೆ ಖ್ಯಾತವಾಗಿರುವ ಬೆಳಗಾವಿಗೆ ಪ್ರಧಾನಿಗಳ ಆಗಮನ! ಫೆಬ್ರುವರಿ 27 ರಂದು ಆಗಮಿಸಲಿರುವ ಪ್ರಧಾನಿಯವರ ಸ್ವಾಗತಕ್ಕೆ ಸಿದ್ಧತೆಗಳು ಯುದ್ಧೋಪಾದಿಯಲ್ಲಿ ನಡೆಯುತ್ತಿವೆ. ನಗರದಲ್ಲಿ 8 ಕಿಮೀಗಳ ಉದ್ದ ರೋಡ್ ಶೋ (road show) ಅನ್ನು ಮೋದಿಯವರು ನಡೆಸಲಿದ್ದು ರಸ್ತೆಯುದ್ದಕ್ಕೂ ಬಿಜೆಪಿ ಕಾರ್ಯಕರ್ತರು ಕೇಸರಿ ಧ್ವಜ, ಮೋದಿಯವರ ಪೋಸ್ಟರ್ ಗಳನ್ನು ನೆಡುತ್ತಿರುವ ದೃಶ್ಯವನ್ನು ನೋಡಬಹುದು. ಸುಮಾರು 10,000 ಮಹಿಳೆಯರು ತಲೆಗೆ ಕೇಸರಿ ಪೇಟಾ ಸುತ್ತಿ ಪ್ರಧಾನಿಗಳನ್ನು ಸ್ವಾಗತಿಸಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ