Health Minister: ಮೈಸೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ದಿನೇಶ್ ಗುಂಡೂರಾವ್ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದಕ್ಕೆ ಕಳವಳ ವ್ಯಕ್ತಪಡಿಸಿದರು

|

Updated on: Jun 27, 2023 | 10:52 PM

ದಿನೇಶ್ ಗುಂಡೂರಾವ್ ಮೈಸೂರಲ್ಲೂ ಸಾಕಷ್ಟು ಜನಪ್ರಿಯರು ಅಂತ ಅನಿಸುತ್ತದೆ, ಆಸ್ಪತ್ರೆ ಆವರಣದಲ್ಲೂ ಜನ ಅವರನ್ನು ಸುತ್ತುವರಿದ್ದಾರೆ

ಮೈಸೂರು: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ಇಂದು ಮೈಸೂರಿನ ಜಿಲ್ಲಾಸ್ಪತ್ರೆಗೆ (district hospital ) ಭೇಟಿ ನೀಡಿ ಪರಿಶಿಲನೆ ನಡೆಸಿದರು. ಅಸ್ಪತ್ರೆಗೆ ಸಂಬಂಧಿಸಿದ ಅಂಕಿ ಅಂಶಗಳನ್ನು ಅಲ್ಲಿನ ಸಿಬ್ಬಂದಿ ಪ್ರೊಜೆಕ್ಟರ್ ಮೂಲಕ ವಿವರಣೆ ನೀಡಿದರು. ಸ್ಲೈಡ್ ಗಳನ್ನು ವೀಕ್ಷಿಸುವಾಗ ಸಚಿವರು ಜಿಲ್ಲಾ ಆರೋಗ್ಯಾಧಿಕಾರಿ (DHO) ಮತ್ತು ಬೇರೆ ವೈದ್ಯರನ್ನು ಹಲವಾರು ಪ್ರಶ್ನೆಗಳನ್ನು ಕೇಳಿದರು. ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಭೇಟಿ ನೀಡುವ ರೋಗಿಗಳ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಸಚಿವ ಕಳವಳ ವ್ಯಕ್ತಪಡಿಸಿದರು. ಸರ್ಕಾರೀ ವೈದ್ಯರು ಖಾಸಗಿ ಪ್ರ್ಯಾಕ್ಟಿಸ್ ಕೂಡ ಮಾಡುವುದರಿಂದ ಅವರ ಗಮನ ಸರ್ಕಾರಿ ಆಸ್ಪತ್ರೆಗಳ ಕಡೆ ಜಾಸ್ತಿ ಹರಿಯದಿರುವುದು ರೋಗಿಗಳ ಸಂಖ್ಯೆ ಕ್ಷೀಣಿಸುತ್ತಿರುವುದಕ್ಕೆ ಕಾರಣವಾಗಿರಬಹುದು. ಈ ಸಮಸ್ಯೆ ಅಥವಾ ದೂರು ಬಹಳ ದಿನಗಳಿಂದ ಕೇಳಿಬರುತ್ತಿದೆ, ಆದರೆ ಪರಿಹಾರ ಮಾತ್ರ ಸಿಗುತ್ತಿಲ್ಲ. ದಿನೇಶ್ ಗುಂಡೂರಾವ್ ಮೈಸೂರಲ್ಲೂ ಸಾಕಷ್ಟು ಜನಪ್ರಿಯರು ಅಂತ ಅನಿಸುತ್ತದೆ, ಆಸ್ಪತ್ರೆ ಆವರಣದಲ್ಲೂ ಜನ ಅವರನ್ನು ಸುತ್ತುವರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ