LS Polls; ಲೋಕ ಸಭಾ ಚುನಾವಣೆಯಲ್ಲಿ ಶಿವಮೊಗ್ಗದಿಂದ ಗೀತಕ್ಕನಿಗೆ ಟಿಕೆಟ್ ನೀಡುವ ವಿಚಾರ ವರಿಷ್ಠರ ವಿವೇಚನಗೆ ಬಿಟ್ಟಿದ್ದು: ಮಧು ಬಂಗಾರಪ್ಪ, ಸಚಿವ
ಗೀತಾ ಅವರಿಗೆ ಶಿವಮೊಗ್ಗದಿಂದ ಟಿಕೆಟ್ ನೀಡಬೇಕೆಂದು ರಾಜ್ಯದ ನಾಯಕರು ಒಲವು ತೋರಿದ್ದಾರೆ ಮತ್ತು ಗೀತಾ ಸಹ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಶಿವಮೊಗ್ಗ: ನಗರದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ತಮ್ಮ ಸಹೋದರಿ ಮತ್ತು ಚಿತ್ರನಟ ಶಿವರಾಜ್ ಕುಮಾರ್ ಧರ್ಮಪತ್ನಿ ಗೀತಾ ಶಿವರಾಜ್ ಕುಮಾರ್ (Geetha Shivarajkumar) ಅವರಿಗೆ ಮುಂಬರುವ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುವ ಸಾಧ್ಯತೆ ಬಗ್ಗೆ ಯಾವುದನ್ನೂ ಸ್ಪಷ್ಟವಾಗಿ ಹೇಳಲಿಲ್ಲ. ಗೀತಾ ಕೆಲ ತಿಂಗಳ ಹಿಂದೆ ಪಕ್ಷ ಸೇರಿ ಸಂಘಟನೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಬಗ್ಗೆ ತಾನು ಮಾತಾಡುವುದು ಸರಿಯಲ್ಲ, ಅದನ್ನು ಪಕ್ಷದ ವರಿಷ್ಠರು ಮತ್ತು ಎಐಸಿಸಿ ಕರ್ನಾಟಕ ಉಸ್ತುವಾರಿಯಾಗಿರುವ ರಂದೀಪ್ ಸಿಂಗ್ ಸುರ್ಜೆವಾಲಾ (Randeep Singh Surjewala) ನಿರ್ಧರಿಸುತ್ತಾರೆ ಎಂದು ಸಚಿವ ಹೇಳಿದರು. ಆದರೆ ಅಸಲು ಸಂಗತಿಯೇನೆಂದರೆ, ಗೀತಾ ಅವರಿಗೆ ಶಿವಮೊಗ್ಗದಿಂದ ಟಿಕೆಟ್ ನೀಡಬೇಕೆಂದು ರಾಜ್ಯದ ಬಹುತೇಕ ನಾಯಕರು ಒಲವು ತೋರಿದ್ದಾರೆ ಮತ್ತು ಗೀತಾ ಸಹ ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ