Shakti Scheme: ಮೊದಲ 15 ದಿನಗಳನ್ನು ಯಶಸ್ವೀಯಾಗಿ ಪೂರೈಸಿದ ಸರ್ಕಾರದ ಶಕ್ತಿ ಯೋಜನೆ; 8 ಕೋಟಿಗೂ ಹೆಚ್ಚು ಮಹಿಳೆಯರಿಂದ ಬಸ್ ಪ್ರಯಾಣ!

Shakti Scheme: ಮೊದಲ 15 ದಿನಗಳನ್ನು ಯಶಸ್ವೀಯಾಗಿ ಪೂರೈಸಿದ ಸರ್ಕಾರದ ಶಕ್ತಿ ಯೋಜನೆ; 8 ಕೋಟಿಗೂ ಹೆಚ್ಚು ಮಹಿಳೆಯರಿಂದ ಬಸ್ ಪ್ರಯಾಣ!

ಅರುಣ್​ ಕುಮಾರ್​ ಬೆಳ್ಳಿ
|

Updated on:Jun 27, 2023 | 7:35 PM

ಶಕ್ತಿ ಯೋಜನೆ ಜಾರಿಯಲ್ಲಿರದಿದ್ದರೆ, ಇಷ್ಟು ಜನ ಮಹಿಳೆಯರಿಂದ ಸಂಸ್ಥೆಗೆ ರೂ. 194,50,13,686 ಸಂದಾಯವಾಗಿರುತಿತ್ತು.

ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆ (Shakti scheme) ಯಶಸ್ವೀಯಾಗಿ ಮೊದಲ 15 ದಿನಗಳನ್ನು ಪೂರೈಸಿದೆ. ಯೋಜನೆ ಆರಂಭಗೊಂಡ ಮೊದಲ ದಿನ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮತ್ತು ಅವರ ಸಂಪುಟ ಸಚಿವರು-ಹೆಚ್ ಕೆ ಪಾಟೀಲ್ (HK Patil), ಎಂಸಿ ಸುಧಾಕರ್ (MC Sudhakar), ಎನ್ ಚಲುವರಾಯಸ್ವಾಮಿ (N Cheluvarayaswamy) ಬಸ್ ಗಳನ್ನು ಹತ್ತಿ ನಿರ್ವಾಹಕನ ಕಾರ್ಯ ನಿರ್ವಹಿಸಿದರು. ಕೆಲವು ಕಡೆ ಅಹಿತಕರ ಘಟನೆಗಳನ್ನು ಬಿಟ್ಟರೆ ಯೋಜನೆ ಸಫಲಾವಾಗಿದೆ ಎಂದು ಹೇಳಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಎಲ್ಲ ನಾಲ್ಕು ವಿಭಾಗಗಳಲ್ಲಿ ಕಳೆದ 15 ದಿನಗಳಲ್ಲಿ ಒಟ್ಟು 8,24,93,637 ಮಹಿಳೆಯರು ಶಕ್ತಿ ಯೋಜನೆಯ ಲಾಭ ಮಾಡಿಕೊಂಡಿದ್ದಾರೆ. ಶಕ್ತಿ ಯೋಜನೆ ಜಾರಿಯಲ್ಲಿರದಿದ್ದರೆ, ಇಷ್ಟು ಜನ ಮಹಿಳೆಯರಿಂದ ಸಂಸ್ಥೆಗೆ ರೂ. 194,50,13,686 ಸಂದಾಯವಾಗಿರುತಿತ್ತು. ಅಂದರೆ, ಒಂದು ತಿಂಗಳಲ್ಲಿ ನಿಗಮವು ಹೆಚ್ಚು ಕಡಿಮೆ ರೂ. 400 ಕೋಟಿಗಳ ಬಿಲ್ ಅನ್ನು ಸರ್ಕಾರಕ್ಕೆ ಸಲ್ಲಿಸಲಿದೆ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jun 27, 2023 07:34 PM