Video: ನೀಟ್ ಕೋಚಿಂಗ್​​ ಸೆಂಟರ್​​ನಿಂದ ಕೆಳಗೆ ಹಾರಲು ಯತ್ನಿಸಿದ ವಿದ್ಯಾರ್ಥಿನಿಯನ್ನು ರಕ್ಷಿಸಿದ ಶಿಕ್ಷಕ

Updated on: Aug 31, 2025 | 8:33 AM

ಜೈಪುರದಲ್ಲಿರುವ ನೀಟ್ ಕೋಚಿಂಗ್​ ಸೆಂಟರ್​​ನ ತಾರಸಿಯಿಂದ ಕೆಳಗೆ ಜಿಗಿಯಲು ಯತ್ನಿಸಿದ ವಿದ್ಯಾರ್ಥಿನಿಯನ್ನು ಶಿಕ್ಷಕರು ರಕ್ಷಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ರಾಜಸ್ಥಾನದ ಕೋಟಾದಲ್ಲಿ ನೀಟ್ ಆಂಕ್ಷಾಂಕ್ಷಿಗಳ ಆತ್ಮಹತ್ಯೆ ಪ್ರಕರಣ ಕಳೆದ ಎರಡು-ಮೂರು ವರ್ಷಗಳಿಂದ ಹೆಚ್ಚಾಗಿದೆ. ಜೈಪುರದಲ್ಲಿ ಚುರುವಿನ 19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಮೂರು ಅಂತಸ್ತಿನ ತರಬೇತಿ ಸಂಸ್ಥೆಯ ಟೆರೇಸ್‌ನಿಂದ ಜಿಗಿಯಲು ಯತ್ನಿಸಿದ್ದಾರೆ.

ಜೈಪುರ, ಆಗಸ್ಟ್​ 31: ಜೈಪುರದಲ್ಲಿರುವ ನೀಟ್ ಕೋಚಿಂಗ್​ ಸೆಂಟರ್​​ನ ತಾರಸಿಯಿಂದ ಕೆಳಗೆ ಜಿಗಿಯಲು ಯತ್ನಿಸಿದ ವಿದ್ಯಾರ್ಥಿನಿಯನ್ನು ಶಿಕ್ಷಕರು ರಕ್ಷಿಸಿರುವ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ರಾಜಸ್ಥಾನದ ಕೋಟಾದಲ್ಲಿ ನೀಟ್ ಆಂಕ್ಷಾಂಕ್ಷಿಗಳ ಆತ್ಮಹತ್ಯೆ ಪ್ರಕರಣ ಕಳೆದ ಎರಡು-ಮೂರು ವರ್ಷಗಳಿಂದ ಹೆಚ್ಚಾಗಿದೆ. ಜೈಪುರದಲ್ಲಿ ಚುರುವಿನ 19 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಮೂರು ಅಂತಸ್ತಿನ ತರಬೇತಿ ಸಂಸ್ಥೆಯ ಟೆರೇಸ್‌ನಿಂದ ಜಿಗಿಯಲು ಯತ್ನಿಸಿದ್ದಾರೆ. ವಿದ್ಯಾರ್ಥಿನಿ ಗೋಪಾಲಪುರದ ಗುರು ಕೃಪಾ ಕೋಚಿಂಗ್‌ನಲ್ಲಿ ತಯಾರಿ ನಡೆಸುತ್ತಿದ್ದಳು. ಆಕೆಯ ಹಾರಲು ಯತ್ನಿಸುತ್ತಿರುವಾಗ ಶಿಕ್ಷಕರು ಹಿಂದಿನಿಂದ ಬಂದು ಆಕೆಯನ್ನು ಎಳೆದುಕೊಂಡಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

 

ವಿಡಿಯೋ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More