ಬೌಲ್ಡ್ ಆಗಿಲ್ಲ, ಕ್ಯಾಚ್ ಸಹ ನೀಡಿಲ್ಲ: ವೈಡ್ ಬಾಲ್ಗೆ ಔಟಾದ ಶಾಯ್ ಹೋಪ್
Trinbago Knight Riders vs Guyana Amazon Warriors: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟ್ರಿನ್ಬಾಗೊ ನೈಟ್ ರೈಡರ್ಸ್ ಪರ ಅಲೆಕ್ಸ್ ಹೇಲ್ಸ್ 74 ರನ್ ಬಾರಿಸಿದರೆ, ಕಾಲಿನ್ ಮನ್ರೊ 52 ರನ್ ಸಿಡಿಸಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು 17.2 ಓವರ್ಗಳಲ್ಲಿ 169 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನ 17ನೇ ಪಂದ್ಯದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ಆಟಗಾರ ಶಾಯ್ ಹೋಪ್ ವೈಡ್ ಬಾಲ್ಗೆ ಔಟಾಗಿರುವುದು. ಅದು ಸಹ ವಿಚಿತ್ರವಾಗಿ ಎಂಬುದು ವಿಶೇಷ.
ಟ್ರಿನ್ಬಾಗೊ ನೈಟ್ ರೈಡರ್ಸ್ ವಿರುದ್ಧದ ಈ ಪಂದ್ಯದ 14ನೇ ಓವರ್ನ ಕೊನೆಯ ಎಸೆತದಲ್ಲಿ ಟೆರೆನ್ಸ್ ಹಿಂಡ್ಸ್ ವೈಡ್ ಎಸೆದಿದ್ದರು. ಈ ವೈಡ್ ಎಸೆತಕ್ಕೆ ಸ್ವಿಚ್ ಹಿಟ್ ಶಾಟ್ ಬಾರಿಸಲು ಯತ್ನಿಸಿ ಶಾಯ್ ಹೋಪ್ ಹಿಟ್ ವಿಕೆಟ್ ಆಗಿದ್ದಾರೆ. ಇದೀಗ ವೈಡ್ ಎಸೆತದಲ್ಲಿ ವಿಕೆಟ್ ಕೈಚೆಲ್ಲಿರುವ ಶಾಯ್ ಹೋಪ್ ಅವರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟ್ರಿನ್ಬಾಗೊ ನೈಟ್ ರೈಡರ್ಸ್ ಪರ ಅಲೆಕ್ಸ್ ಹೇಲ್ಸ್ 74 ರನ್ ಬಾರಿಸಿದರೆ, ಕಾಲಿನ್ ಮನ್ರೊ 52 ರನ್ ಸಿಡಿಸಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಟ್ರಿನ್ಬಾಗೊ ನೈಟ್ ರೈಡರ್ಸ್ ತಂಡವು 17.2 ಓವರ್ಗಳಲ್ಲಿ 169 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

