ಬೆಂಗಳೂರು, ಅಕ್ಟೋಬರ್ 30: ಬೆಂಗಳೂರು (Bengaluru) ನಗರದ ಹಲವೆಡೆ ಮತ್ತೆ ಧಾರಾಕಾರ ಮಳೆಯಾಗಿದೆ (Rain). ಆರ್ಆರ್ ನಗರ, ಕೆಂಗೇರಿ, ವಿಜಯನಗರ (Vijayanagar), ಬ್ಯಾಟರಾಯನಪುರ, ಚಂದ್ರಲೇಔಟ್, ಜ್ಞಾನಭಾರತಿ, ನಾಗರಬಾವಿ, ಮಾಗಡಿ ರಸ್ತೆ, ಸುಮ್ಮನಹಳ್ಳಿ ಸೇರಿದಂತೆ ಹಲವೆಡೆ ನಗರದ ಹಲವೆಡೆ ಮಳೆಯಾಗಿದೆ.
ಭಾರಿ ಮಳೆಯಿಂದಾಗಿ ಸುಮ್ಮನಹಳ್ಳಿ ಜಂಕ್ಷನ್ ಬಳಿ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ನಿಂದ ವಾಹನ ಸವಾರರು ಪರದಾಡಿದರು. ಟ್ರಾಫಿಕ್ ನಿಯಂತ್ರಣಕ್ಕೆ ಸಂಚಾರಿ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
ಸುಮನಹಳ್ಳಿ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯಿಂದ ಸಂಚರಿಸುವಂತೆ ವಾಹನ ಸವಾರರಲ್ಲಿ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಇನ್ನು, ಬಾಗಲೂರು ಕ್ರಾಸ್ ಅಂಡರ್‌ಪಾಸ್‌ನಲ್ಲಿ ನೀರು ನಿಂತಿರುವುದರಿಂದ ಏರ್‌ಪೋರ್ಟ್ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮುಂದಿನ 5 ದಿನ ಸಾಧಾರಣ ಮಳೆ
ಹೊಸೂರು ಮುಖ್ಯರಸ್ತೆ ವೀರಸಂದ್ರದ ಬಳಿ ಮಳೆ ಬಿದ್ದು ವಾಟರ್ ಲಾಗಿಂಗ್ ಆಗಿ ಸಂಚಾರ ನಿಧಾನಗತಿಯಲ್ಲಿ ಸಾಗುತ್ತಿದೆ. ಆದ್ದರಿಂದ ಹೊಸೂರು ಕಡೆ ಹೋಗುವ ವಾಹನ ಸವಾರರು ಫ್ಲೈ ಓವರ್ ಕೆಳಗಿನ ರಸ್ತೆ ಬಳಸುವುದು ಹಾಗೂ ಇತರೆ ಬದಲಿ ರಸ್ತೆಗಳನ್ನು ಬಳಸಬೇಕೆಂದು ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಕೆಲಕಾಲ ಸುರಿದ ಮಳೆಯಿಂದ ಗೊರಗುಂಟೆಪಾಳ್ಯ ಬಳಿ ರಸ್ತೆ ಮೇಲೆ ಮಳೆ ನೀರು ನಿಂತು ಅವಾಂತರ ಸೃಷ್ಟಿಯಾಗಿದೆ. ಗೊರಗುಂಟೆಪಾಳ್ಯ-ಪೀಣ್ಯಾ ಸಂಪರ್ಕ ರಸ್ತೆ ಜಲಾವೃತಗೊಂಡಿದೆ. ನಿಂತ ನೀರಿನಲ್ಲೇ ವಾಹನಗಳು ಸಂಚರಿಸುತ್ತಿವೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ