Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು

Vijayapura Rain: ವಿಜಯಪುರದಲ್ಲಿ ಭಾರೀ ಮಳೆ, ಕೆರೆಯಂತಾದ ರಸ್ತೆಗಳು

ಅಶೋಕ ಯಡಳ್ಳಿ, ವಿಜಯಪುರ
| Updated By: ಆಯೇಷಾ ಬಾನು

Updated on: Sep 24, 2024 | 10:03 AM

ವಿಜಯಪುರ ನಗರದ ಶಾಲಿ ನಗರ, ಭಾಗವಾನ್ ಕಾಲೋನಿ, ರಹೀಂ ನಗರ, ಮುಜಾವರ್ ಪ್ಲಾಟ್, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರದಲ್ಲಿ ಮನೆಗಳು, ಅಂಗಡಿಗಳು ಜಲಾವೃತಗೊಂಡಿವೆ. ಬೈಕ್​ಗಳು ನೀರಲ್ಲಿ‌ ಮುಳುಗಿವೆ. ಮನೆಗಳಲ್ಲಿರೋ ವಸ್ತುಗಳು, ಆಹಾರ ಧಾನ್ಯಗಳು ನೀರು ಪಾಲಾಗಿವೆ. ನೀರನ್ನು ಹೊರ ಹಾಕಲು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ರಾತ್ರಿಯಿಡಿ ಭಾರಿ ಮಳೆ ಸುರಿದಿದೆ. ಭಾರಿ ಮಳೆಗೆ ಹಳ್ಳ ಕೊಳ್ಳಗಳು ಭರ್ತಿಯಾಗಿವೆ. ಹಳ್ಳಗಳು ಮೈದುಂಬಿ ಹರಿದಿವೆ. ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ಭರ್ತಿಯಾಗಿದೆ. ರಾತ್ರಿ ಸತತ 5 ಗಂಟೆಗೂ ಅಧಿಕ ಸಮಯ ಮಳೆ ಸುರಿದಿದೆ. ವಿಜಯಪುರ ನಗರದ ಶಾಲಿ ನಗರ, ಭಾಗವಾನ್ ಕಾಲೋನಿ, ರಹೀಂ ನಗರ, ಮುಜಾವರ್ ಪ್ಲಾಟ್, ಪ್ರೈಂ ನಗರ, ಕನ್ನಾನ್ ನಗರ, ನೆಹರೂ ನಗರದಲ್ಲಿ ಮನೆಗಳು, ಅಂಗಡಿಗಳು ಜಲಾವೃತಗೊಂಡಿವೆ. ಬೈಕ್​ಗಳು ನೀರಲ್ಲಿ‌ ಮುಳುಗಿವೆ. ಜಲಾವೃತವಾದ ಮನೆಗಳಿಂದ ಜನರನ್ನು ಸ್ಥಳಾಂತರಿಸಲಾಗುತ್ತಿದೆ. ಮನೆಗಳಲ್ಲಿರೋ ವಸ್ತುಗಳು, ಆಹಾರ ಧಾನ್ಯಗಳು ನೀರು ಪಾಲಾಗಿವೆ. ನೀರನ್ನು ಹೊರ ಹಾಕಲು ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹರ ಸಾಹಸ ಪಡುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ