Delhi Rains: ಮಳೆಯಿಂದ ಕೆರೆಯಂತಾದ ದೆಹಲಿಯ ರಸ್ತೆಗಳು; ನ್ಯಾಯ ಬೇಕೆಂದು ಘೋಷಣೆ ಕೂಗಿದ ಯುವಕರು
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ಹಲವಾರು ಪ್ರಮುಖ ರಸ್ತೆಗಳಲ್ಲಿ ನೀರು ತುಂಬಿ ಕೆರೆಯಂತಾಗಿವೆ. ಇದರಿಂದ ಪ್ರಯಾಣಿಕರು ತಮ್ಮ ವಾಹನಗಳನ್ನು ಬಿಟ್ಟು ಮೊಣಕಾಲು ಮಟ್ಟಕ್ಕೆ ಹರಿಯುವ ನೀರಿನಲ್ಲಿ ನಡೆಯುತ್ತಾ ರಸ್ತೆ ದಾಟುತ್ತಿದ್ದಾರೆ. ಇದೇ ರೀತಿಯ ಮಳೆಗೆ ಕಳೆದ ವಾರ ಕೋಚಿಂಗ್ ಸೆಂಟರ್ಗೆ ನೀರು ನುಗ್ಗಿ ಯುಪಿಎಸ್ಸಿ ತರಬೇತಿ ಪಡೆಯುತ್ತಿದ್ದವರು ಸಾವನ್ನಪ್ಪಿದ್ದರು.
ನವದೆಹಲಿ: ನವದೆಹಲಿಯ ಹಲವು ಪ್ರಮುಖ ರಸ್ತೆಗಳಲ್ಲಿ ಭಾರೀ ಮಳೆಯಿಂದ ರಸ್ತೆಗಳು ಜಲಾವ್ರತವಾಗಿವೆ. ಆ ರಸ್ತೆಗಳಲ್ಲಿ ಕೋಚಿಂಗ್ ಸೆಂಟರ್ನ ವಿದ್ಯಾರ್ಥಿಗಳು ಮಳೆಯಿಂದ ಸಾವನ್ನಪ್ಪಿದ ರಾಜೇಂದ್ರ ನಗರ ಕೂಡ ಸೇರಿದೆ. ಈ ಭಾಗದಲ್ಲಿ 20 ನಿಮಿಷ ಸುರಿದ ಮಳೆಗೆ ರಸ್ತೆ ಕೆರೆಯಂತಾಗಿದ್ದು, ಸೊಂಟದವರೆಗೂ ಮಳೆ ನೀರು ನಿಂತಿದೆ. ಇದರಿಂದ ನ್ಯಾಯ ಬೇಕೆಂದು ಯುವಕರು ಕೋಚಿಂಗ್ ಸೆಂಟರ್ ಎದುರು ನಿಂತ ಮಳೆನೀರಿನಲ್ಲಿ ಕೈ ಕೈ ಹಿಡಿದು ಘೋಷಣೆ ಕೂಗುತ್ತಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ