ಮಧ್ಯರಾತ್ರಿ ಸುರಿದ ಮಳೆ ಅಬ್ಬರಕ್ಕೆ ಶಿವಮೊಗ್ಗದಲ್ಲಿ ಮನೆಗೆ ನುಗ್ಗಿದ ನೀರು: ಭಾರಿ ಅವಾಂತರ

Edited By:

Updated on: Apr 01, 2026 | 9:29 AM

ಶಿವಮೊಗ್ಗದ ಶರಾವತಿ ನಗರದಲ್ಲಿ ನಿನ್ನೆ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಉಕ್ಕಿ ಹರಿದ ತುಂಗಾ ಚಾನಲ್ ನೀರು ಮನೆಗೆ ನುಗ್ಗಿ ಭಾರಿ ಅವಾಂತರ ಸೃಷ್ಟಿಸಿದೆ. ಮನೆಯಲ್ಲಿದ್ದ ಆಹಾರ ಧಾನ್ಯ, ಹಾಸಿಗೆ ಹಾಗೂ ಪೀಠೋಪಕರಣಗಳು ನೀರು ಪಾಲಾಗಿದ್ದು, ಇದರಿಂದ ನಿವಾಸಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶಿವಮೊಗ್ಗ, ಏಪ್ರಿಲ್​​ 01: ನಿನ್ನೆ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ಶಿವಮೊಗ್ಗದ ನಗರದ ಶರಾವತಿ ನಗರ ಬಡಾವಣೆಯ ಮನೆಯೊಂದಕ್ಕೆ ಚಾನಲ್ ನೀರು ನುಗ್ಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ರಾತ್ರಿ 12 ಗಂಟೆಯ ವೇಳೆಗೆ ಗುಡುಗು ಸಮೇತ ಆರಂಭವಾದ ಮಳೆ, ಬೆಳಗ್ಗಿನ ಜಾವ ಸುಮಾರು 3 ಗಂಟೆಯವರೆಗೂ ಸುರಿದಿದೆ. ಭಾರಿ ಮಳೆ ಹಿನ್ನೆಲೆ ತುಂಗಾ ಚಾನಲ್​​ನಿಂದ ಉಕ್ಕಿ ಹರಿದ ನೀರು ತಗ್ಗುಪ್ರದೇಶದಲ್ಲಿರುವ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ ಸಾಮಗ್ರಿಗಳು ನೀರಿನಲ್ಲಿ ನೆಂದು ತೊಪ್ಪೆಯಾಗಿದ್ದು,
ಹಾಸಿಗೆ, ಮಂಚ, ಅಡುಗೆ ಮನೆಯ ಬಹುತೇಕ ವಸ್ತುಗಳು ನೀರು ಪಾಲಾಗಿವೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Apr 01, 2026 09:29 AM
Loading...
Unable to load recommendations.
Follow Us