ಸವದತ್ತಿ ಯಲ್ಲಮ್ಮ ದೇಗುಲಕ್ಕೆ ನುಗ್ಗಿದ್ದ ಮಳೆನೀರು: ಹುಂಡಿಯಲ್ಲಿದ್ದ ನೋಟುಗಳನ್ನ ಒಣ ಹಾಕಿದ ಸಿಬ್ಬಂದಿ
ಸವದತ್ತಿ ಯಲ್ಲಮ್ಮ ದೇವಾಲಯದ ಗರ್ಭಗುಡಿಗೆ ದೊಡ್ಡ ಮಟ್ಟದಲ್ಲಿ ನೀರು ನುಗ್ಗಿದ್ದರಿಂದ ಹುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದ ನೋಟುಗಳೆಲ್ಲ ತೊಯ್ದು ತೊಪ್ಪೆಯಾಗಿವೆ. ಸದ್ಯ ದೇವಾಲಯದ ಆಡಳಿತ ಮಂಡಳಿ ಹುಂಡಿಗಳನ್ನು ಓಪನ್ ಮಾಡಿ ನೋಟುಗಳನ್ನು ದೇವಾಲಯದ ಆವರಣದಲ್ಲಿ ಒಣ ಹಾಕಿದ್ದಾರೆ. ಕೆಲವು ನೋಟುಗಳಿಗೆ ಮಣ್ಣು ಮೆತ್ತಿಕೊಂಡಿದ್ದು ಅಂತಹುಗಳನ್ನು ಸ್ವಚ್ಛಗೊಳಿಸಲಾಗಿದೆ.
ಬೆಳಗಾವಿ, (ಆಗಸ್ಟ್ 12): ಕಳೆದ ಎರಡು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಸವದತ್ತಿ ಯಲ್ಲಮ್ಮ ದೇವಾಲಯದ (Savadatti Yellamma temple) ಗರ್ಭಗುಡಿಗೆ ನೀರು ನುಗ್ಗಿತ್ತು. ಇದರಿಂದ ಕಾಣಿಕೆ ಹುಂಡಿಗಳು ನೀರಿನಿಂದ ತುಂಬಿದ್ದವು. ಇದೀಗ ನೀರು ಕಡಿಮೆಯಾಗಿದ್ದರಿಂದ ಅಲ್ಲಿನ ಸಿಬ್ಬಂದಿ ದೇಗುಲ ಸ್ವಚ್ಛತೆ ಮಾಡುತ್ತಿದ್ದಾರೆ. ದೇವಾಲಯದ ಗರ್ಭಗುಡಿಗೆ ದೊಡ್ಡ ಮಟ್ಟದಲ್ಲಿ ನೀರು ನುಗ್ಗಿದ್ದರಿಂದ ಹುಂಡಿಗಳಲ್ಲಿ ನೀರು ತುಂಬಿಕೊಂಡಿತ್ತು. ಇದರಿಂದ ನೋಟುಗಳೆಲ್ಲ ತೊಯ್ದು ತೊಪ್ಪೆಯಾಗಿವೆ. ಸದ್ಯ ದೇವಾಲಯದ ಆಡಳಿತ ಮಂಡಳಿ ಹುಂಡಿಗಳನ್ನು ಓಪನ್ ಮಾಡಿ ನೋಟುಗಳನ್ನು ದೇವಾಲಯದ ಆವರಣದಲ್ಲಿ ಒಣ ಹಾಕಿದ್ದಾರೆ. ಕೆಲವು ನೋಟುಗಳಿಗೆ ಮಣ್ಣು ಮೆತ್ತಿಕೊಂಡಿದ್ದು ಅಂತಹುಗಳನ್ನು ಸ್ವಚ್ಛಗೊಳಿಸಲಾಗಿದೆ.
Latest Videos

