ಪಾಲ್ಘರ್‌ನ ಧಾಮಣಿ ಡ್ಯಾಂನ 5 ಗೇಟ್ ಓಪನ್; ಧುಮ್ಮುಕ್ಕುವ ನೀರಿನ ರೌದ್ರಾವತಾರ ನೋಡಿ

Updated on: Jul 23, 2026 | 11:25 PM

ಮಹಾರಾಷ್ಟ್ರದ ಪಾಲಘರ್ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸತತ ಮಳೆಯ ಪರಿಣಾಮವಾಗಿ ಜಿಲ್ಲೆಯ ಪ್ರಮುಖ ಜಲಾಶಯಗಳು ತುಂಬಿ ಹರಿಯುತ್ತಿದ್ದು, ನದಿ-ನಾಲೆಗಳಲ್ಲಿ ನೀರಿನ ಮಟ್ಟ ಗಣನೀಯವಾಗಿ ಹೆಚ್ಚಾಗಿದೆ. ಸೂರ್ಯ ಯೋಜನೆಯಡಿ ಬರುವ ಪ್ರಮುಖ ಧಾಮಣಿ ಅಣೆಕಟ್ಟಿನಲ್ಲಿ ನೀರಿನ ಸಂಗ್ರಹಣೆ ಶೇ. 93ರಷ್ಟಾಗಿದೆ. ಜಲಾಶಯದ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಮತ್ತು ಹೆಚ್ಚುವರಿ ನೀರನ್ನು ಹೊರಬಿಡಲು ಅಣೆಕಟ್ಟಿನ 5 ಗೇಟ್‌ಗಳನ್ನು ತೆರೆಯಲಾಗಿದೆ.

ಪಾಲ್ಘರ್‌, ಜುಲೈ 23: ಮಹಾರಾಷ್ಟ್ರದ ಪಾಲ್ಘರ್‌ (Palghar Dam) ಜಿಲ್ಲೆಯಾದ್ಯಂತ ಭಾರಿ ಮಳೆ ಮುಂದುವರಿದಿದ್ದು, ಜಲಾಶಯಗಳು ಸಂಪೂರ್ಣ ಭರ್ತಿಯಾಗಿ ಹರಿಯುತ್ತಿವೆ. ಸೂರ್ಯ ಯೋಜನೆಯಡಿ ಬರುವ ಧಾಮಣಿ ಅಣೆಕಟ್ಟಿನ 5 ಗೇಟ್‌ಗಳನ್ನು 75 ಸೆಂಟಿಮೀಟರ್‌ಗಳಷ್ಟು ತೆರೆಯಲಾಗಿದ್ದು, ಅಪಾರ ಪ್ರಮಾಣದ ನೀರನ್ನು ಸೂರ್ಯ ನದಿಗೆ ಹರಿಸಲಾಗುತ್ತಿದೆ. ಧಾಮಣಿ ಅಣೆಕಟ್ಟು ಹಾಗೂ ಕವಡಾಸ್ ಪಿಕಪ್ ವೆಯರ್ ಜಲಾಶಯಗಳಿಂದ ಒಟ್ಟಾರೆಯಾಗಿ 37,303 ಕ್ಯೂಸೆಕ್ ನೀರನ್ನು ಸೂರ್ಯ ನದಿಗೆ ಬಿಡಲಾಗುತ್ತಿದೆ. ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸೂರ್ಯ ನದಿ ಪಾತ್ರದ ದಂಡೆಯ ಮೇಲಿರುವ ಹಳ್ಳಿಗಳಿಗೆ ಜಿಲ್ಲಾಡಳಿತ ಹಾಗೂ ವಿಪತ್ತು ನಿರ್ವಹಣಾ ತಂಡವು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ನೀಡಿದೆ. ನದಿ ತೀರಕ್ಕೆ ಜನರು ತೆರಳದಂತೆ ಸೂಚಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us