ಕೋಲಾರದಲ್ಲಿ ಭಾರಿ ಮಳೆ; ಜಲಾವೃತವಾದ ಅಂಡರ್ಪಾಸ್ ನೀರಲ್ಲಿ ಸಿಲುಕಿ ಕಾರು ಚಾಲಕನ ಪರದಾಟ ನೋಡಿ
ದಿಢೀರ್ ವರುಣಾರ್ಭಟಕ್ಕೆ ಕೋಲಾರದ ಜನ ಕಂಗಾಲಾಗಿದ್ದಾರೆ. ಅದರಲ್ಲೂ ಅರಹಳ್ಳಿ ರೈಲ್ವೇ ಅಂಡರ್ ಪಾಸ್ ಜಲಾವೃತವಾಗಿದ್ದು, ನೀರಲ್ಲಿ ಸಿಲುಕಿ ಕಾರು ಚಾಲಕ ಪರದಾಟ ನಡೆಸಿದ್ದಾರೆ. ಕಳೆದ ಒಂದು ಗಂಟೆಯಿಂದ ಸುರಿದ ಮಳೆಗೆ ಕೋಲಾರ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ.
ಕೋಲಾರ, ಆ.06: ಭಾರೀ ಮಳೆಗೆ ಕೋಲಾರ(Kolar)ದ ಅರಹಳ್ಳಿ ರೈಲ್ವೇ ಅಂಡರ್ ಪಾಸ್ ತುಂಬಿಕೊಂಡಿದ್ದು, ಬಸ್, ಕಾರು ಸೇರಿದಂತೆ ವಾಹನ ಸವಾರರು ಪರದಾಟ ನಡೆಸಿದ್ದಾರೆ. ಕೋಲಾರ-ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯ ಅಂಡರ್ ಪಾಸ್ನಲ್ಲಿ ಮಳೆಯಿಂದಾಗಿ ಸಂಪೂರ್ಣವಾಗಿ ನೀರು ತುಂಬಿ ಹರಿಯುತ್ತಿದೆ. ಕಳೆದ ಒಂದು ಗಂಟೆಯಿಂದ ಸುರಿದ ಮಳೆಗೆ ಕೋಲಾರ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿದ್ದು, ಇದರಿಂದ ಹಲವೆಡೆ ಯುಜಿಡಿ ತುಂಬಿ ಹರಿಯುತ್ತಿದೆ. ಇನ್ನು ದಿಢೀರ್ ಮಳೆಗೆ ವಾಹನ ಸವಾರರು ಕಂಗಾಲಾಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 06, 2024 09:31 PM