ನಾಯಿ ಮೇಲೆ ಹರಿದ ತ್ರಿಬಲ್​ ರೈಡರ್ಸ್​​​ ಬೈಕ್​: ವಿಡಿಯೋ ವೈರಲ್​

ಆಗಸ್ಟ್​ 4 ರಂದು ಬೆಂಗಳೂರಿನ ರಸ್ತೆಯೊಂದರಲ್ಲಿ ಮನಕಲಕುವ ಘಟನೆ ನಡೆದಿದೆ. ದಿಢೀರನೆ ಅಡ್ಡ ಬಂದ ನಾಯಿ ಮೇಲೆ ಬೈಕ್​ನ ಹಿಂದಿನ ಚಕ್ರ ಹಿರದಿದ್ದು, ನಾಯಿ ನಡುರಸ್ತೆಯಲ್ಲಿ ನರಾಳಾಡಿದ ದೃಶ್ಯ ಮನಕಲಕುವಂತಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ನಾಯಿ ಮೇಲೆ ಹರಿದ ತ್ರಿಬಲ್​ ರೈಡರ್ಸ್​​​ ಬೈಕ್​: ವಿಡಿಯೋ ವೈರಲ್​
ನಾಯಿ ಮೇಲೆ ಹರಿದ ಬೈಕ್​
Follow us
ವಿವೇಕ ಬಿರಾದಾರ
|

Updated on:Aug 06, 2024 | 11:35 AM

ಬೆಂಗಳೂರು, ಆಗಸ್ಟ್​ 06: ದಿಢೀರನೆ ಅಡ್ಡ ಬಂದ ಪರಿಣಾಮ ನಾಯಿಯ (Dog) ಮೇಲೆ ದ್ವೀಚಕ್ರ ವಾಹನ ಹರಿದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ನಾಯಿ ಮೇಲೆ ದ್ವೀಚಕ್ರ ವಾಹನ (Bike) ಹರಿದ ವಿಡಿಯೋ ಹಿಂದಿನ ಕಾರಿನ ಡ್ಯಾಶ್​​​​ಬೋರ್ಡ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ವೈರಲ್​ ಆಗುತ್ತಿದೆ. ಆಗಸ್ಟ್​​ 4 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಹೆಲ್ಮೇಟ್​ ಧರಿಸದೆ, ಬೈಕ್​​ನಲ್ಲಿ ಮೂವರು ಸಾಗುತ್ತಿದ್ದರು. ಈ ವೇಳೆ ನಾಯಿ ಓಡುತ್ತ ರಸ್ತೆ ಮೇಲೆ ದಿಢೀರನೆ ಬಂದಿದೆ. ಆಗ ಸವಾರ ವಾಹನವನ್ನು ಸ್ಲೋ ಮಾಡಿ ಮುಂದಿನ ಚಕ್ರ ನಾಯಿ ಮೇಲೆ ಹರಿಯದಂತೆ ತಪ್ಪಿಸಿದ್ದಾನೆ. ಆದರೆ, ಹಿಂದಿನ ಚಕ್ರ ನಾಯಿ ಮೇಲೆ ಹರಿದಿದೆ. ಇದರಿಂದ ನಾಯಿ ಕಾಲಿಗೆ ಪೆಟ್ಟಾಗಿದೆ. ಬಳಿಕ ವಾಹನ ಸವಾರ ಬೈಕ್​ ನಿಲ್ಲಿಸಿ ನಾಯಿ ಬಳಿ ಬಂದು ಏನಾಗಿದೆ ಎಂದು ಗಮನಿಸಿದ್ದಾನೆ. ಸ್ಥಳೀಯರು ನಾಯಿ ಬಳಿ ಬಂದು ಅದನ್ನು ಸುರಕ್ಷಿತವಾಗಿ ರಸ್ತೆಬದಿಗೆ ಕರೆದೊಯ್ದರು.

ಈ ವಿಡಿಯೋವನ್ನು ನಾನು ವಾಚಿಂಗ್​​ ಎಂಬ ಎಕ್ಸ್​ ಖಾತೆದಾರ ಟ್ವೀಟ್​​ ಮಾಡಿದ್ದು, ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ಎಂದು ಬೆಂಗಳೂರು ನಗರ ಪೊಲೀಸ್​​ ಟ್ಯಾಗ್​ ಮಾಡಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 1 ವಾರ ವಾಹನ ಸಂಚಾರ ಬಂದ್​!

ಇದಕ್ಕೆ ಪ್ರತಿಕ್ರಿಯಿಸಿದ ನಗರ ಪೊಲೀಸರು ಸಂಬಂಧಪಟ್ಟ ಪ್ರದೇಶದ ಪೊಲೀಸರಿಗೆ ವಿಚಾರ ತಿಳಿಸಲಾಗುವುದು ಮತ್ತು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿಲಾಗುವುದು ಎಂದು ತಿಳಿಸಿದರು.

ದ್ವೀಚಕ್ರ ವಾಹನದಲ್ಲಿ ಹೋಗುವಾಗ ನಿಧಾನ ಮತ್ತು ಹೆಲ್ಮೇಟ್​ ಧರಿಸಿ ಸಂಚರಿಸಬೇಕೆಂದು ಬೆಂಗಳೂರು ನಗರ ಸಂಚಾರ ಪೊಲೀಸರು ಸೂಚನೆ ನೀಡುತ್ತಿದ್ದರೂ, ಸವಾರರು ಮಾತ್ರ ಪಾಲನೆ ಮಾಡುತ್ತಿಲ್ಲ. ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುತ್ತಲೇ ಇದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:32 am, Tue, 6 August 24

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ