ಯಾವಾಗ ನಿಮ್ಮ ಖಾತೆಗೆ ಜಮೆಯಾಗಲಿದೆ ಗೃಹಲಕ್ಷ್ಮಿ ಹಣ? ಡಿಕೆ ಶಿವಕುಮಾರ್ ಹಿಂಟ್ಸ್
ಮಹಿಳಾ ಸಬಲೀಕರಣ ಉದ್ದೇಶದಿಂದ ಕರ್ನಾಟಕ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಐದು ಗ್ಯಾರಂಟಿಗಳ ಪೈಕಿ ಒಂದಾದ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮನೆ ಯಜಮಾನಿ ಖಾತೆಗೆ ಎರಡು ಸಾವಿರ ಜಮಾವಣೆಯಾಗುತ್ತದೆ. ಆದರೆ ಕಳೆದ ಎರಡು ತಿಂಗಳಿಂದ ಹಣ ಬಂದಿರಿಲ್ಲ. ಈ ಹಣ ಜಮಾವಣೆ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಬಿಗ್ ಅಪ್ಡೇಟ್ ನೀಡಿದ್ದಾರೆ.
ಬೆಂಗಳೂರು, ಆಗಸ್ಟ್ 06: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿ (5 Guarantee) ಯೋಜನೆಗಳ ಪೈಕಿ ಗೃಹಲಕ್ಷ್ಮಿ (Gruha Laxmi) ಯೋಜನೆಯೂ ಒಂದು. ಮಹಿಳಾ ಸಬಲೀಕರಣ ಭಾಗವಾಗಿ ಕಾಂಗ್ರೆಸ್ ಸರ್ಕಾರ ಗೃಹಲಕ್ಷ್ಮಿ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಸರ್ಕಾರ ಮನೆಯ ಯಜಮಾನಿ ಖಾತೆಗೆ 2 ಸಾವಿರ ರೂ. ಜಮೆ ಮಾಡುತ್ತದೆ. ಕಳೆದ 10 ತಿಂಗಳಿಂದ ಹಣ ಜಮೆಯಾಗಿದ್ದು, ಜೂನ್ ಮತ್ತು ಜುಲೈನ ಹಣ ಜಮಾವಣೆಗೊಂಡಿಲ್ಲ. ಈ ಎರಡು ತಿಂಗಳ ಹಣ ಜಮಾವಣೆ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಬಿಗ್ ಅಪ್ಡೇಟ್ ನೀಡಿದ್ದಾರೆ.
ಮದ್ದೂರಿನಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಷಣ ಮಾಡುತ್ತ, ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ಹಣ ಬರ್ತಿದೆಯೋ? ಇಲ್ವೋ? ಎಂದು ಪ್ರಶ್ನಿಸಿದರು. ಆಗ ವೇದಿಕೆ ಮುಂಭಾಗದಲ್ಲಿದ್ದ ಮಹಿಳೆಯರು ಬರುತ್ತಿಲ್ಲ, ಬರುತ್ತಿಲ್ಲ ಎಂದು ಕೂಗಿದರು. ಆಗ ಡಿಕೆ ಶಿವಕುಮಾರ್ ಬರುತ್ತೆ ಬರುತ್ತೆ ಕಾಯುತ್ತಿರಿ. ಕಳೆದ ಒಂದು, ಎರಡು ತಿಂಗಳ ಗೃಹಲಕ್ಷ್ಮಿ ಹಣ ಮಾತ್ರ ನಿಮ್ಮ ಖಾತೆ ಜಮೆ ಆಗಿಲ್ಲ. ಅನುದಾನ ಬಿಡುಗಡೆಯಾಗಿದೆ. ಶ್ರೀಘವೇ ನಿಮ್ಮ ಖಾತೆಗೆ ಹಣ ಜಮೆಯಾಗಲಿದೆ ಎಂದರು.
ಇದನ್ನೂ ಓದಿ: ಗೃಹಜ್ಯೋತಿ ಯೋಜನೆಯ 8,844 ಕೋಟಿ ರೂ. ಬಿಲ್ ಪಾವತಿಸಿದ ಸರ್ಕಾರ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಸಂದರ್ಭದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಹಣವನ್ನು ಒಮ್ಮೆಲೆ ಪಾವತಿ ಮಾಡಲಾಗಿತ್ತು. ಇದೀಗ ಕಾರಣಾಂತರಗಳಿಂದ ಜೂನ್ ಮತ್ತು ಜುಲೈ ತಿಂಗಳ ಹಣ ಪಾವತಿ ಬಾಕಿ ಉಳಿದಿದೆ. ಈ ಹಣ ಅಗಸ್ಟ್ ವಾರಾಂತ್ಯದೊಳಗೆ ಜಮಾವಣೆಯಾಗಲಿದೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಗೃಹಲಕ್ಷ್ಮಿ ಹಣ ನೇರ ಲಾಭ ವರ್ಗಾವಣೆ (DBT) ಮೂಲಕ ಮನೆಯ ಯಜಮಾನಿ ಖಾತೆಗೆ ತಲಪುತ್ತದೆ. ಈಗಾಗಲೆ 10 ತಿಂಗಳ ಹಣ ನೀಡಲಾಗಿದೆ. ಒಟ್ಟು 20 ಸಾವಿರ ರೂ. ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇದೀಗ ಎರಡು ತಿಂಗಳ ಹಣ ಅಂದರೆ ಒಟ್ಟು 4 ಸಾವಿರ ರೂ. ಅನ್ನು ಫಲಾನುಭವಿಗಳ ಕೈ ಸೇರಲಿದೆ.
ಜೂನ್ ಮತ್ತು ಜುಲೈ ತಿಂಗಳ ಹಣ ಜಮೆಯಾಗದಿದ್ದಕ್ಕೆ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಮಹಿಳೆಯರು ಇನ್ಮುಂದೆ ನಮಗೆ ಹಣ ಬರತ್ತೋ ಇಲ್ವೋ ಅಂತ ಚಿಂತಿತರಾಗಿದ್ದರು. ಆದರೆ ಇದೀಗ, ಈ ಚಿಂತೆ ದೂರವಾದಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:04 am, Tue, 6 August 24