ಬೆಂಗಳೂರಿನ ಈ ರಸ್ತೆಯಲ್ಲಿ 1 ವಾರ ವಾಹನ ಸಂಚಾರ ಬಂದ್!
ಬೆಂಗಳೂರಿನಲ್ಲಿ ಸದ್ಯ ನಮ್ಮ ಮೆಟ್ರೋ ಬಿಎಂಆರ್ಸಿಎಲ್ ಕಾಮಗಾರಿಗಳು ವೇಗದ ಗತಿಯಲ್ಲಿ ಸಾಗುತ್ತಿದೆ. ಇದರಿಂದ ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಇದೀಗ ಬೆಂಗಳೂರಿನ ಈ ರಸ್ತೆಯಲ್ಲಿ ಒಂದು ವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

ಬೆಂಗಳೂರು, ಆಗಸ್ಟ್ 06: ಹೊರ ವರ್ತುಲ ರಸ್ತೆಯ (Outer Ring Road) ಐಬಿಐಎಸ್ ಹೊಟೇಟಲ್ನಿಂದ ದೇವರಬೀಸನಹಳ್ಳಿ ಜಂಕ್ಷನ್ವರೆಗಿನ ಸರ್ವಿಸ್ ರಸ್ತೆಯಲ್ಲಿ ಒಂದು ವಾರ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಸರ್ವಿಸ್ ರಸ್ತೆಯಲ್ಲಿ ಬಿಎಂಆರ್ಸಿಎಲ್ (BMRCL) ಮತ್ತು ಬೆಸ್ಕಾಂ (BSCOM) ವತಿಯಿಂದ ಕೇಬಲ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಆಗಸ್ಟ್ 13ರವರೆಗೆ ಈ ರಸ್ತೆಯಲ್ಲಿ ರಾತ್ರಿ 11 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ವಾಹನ ಸಂಚಾರ ನಿಷೇಧಿಸಿ ಎಂದು ಬೆಂಗಳೂರು ಸಂಚಾರ ಪೊಲೀಸ್ ಮಾಧ್ಯಮ ಪ್ರಕಟಣೆ ಹೊರಡಸಿದೆ. ಬದಲಿ ಮಾರ್ಗ ಸೂಚಿಸಲಾಗಿದೆ.
ಪರ್ಯಾಯ ಮಾರ್ಗ
ಕಾಮಗಾರಿ ಸಮಯದಲ್ಲಿ ಸುಗಮ ಸಂಚಾರಕ್ಕಾಗಿ ದೇವರಬಿಸನಹಳ್ಳಿ ಮೇಲು ಸೇತುವೆ ಮೂಲಕ ಸಂಚರಿಸಬಹುದಾಗಿದೆ.
#ಸಂಚಾರಸಲಹೆ#TrafficAdvisory @DgpKarnataka @KarnatakaCops @CPBlr @Jointcptraffic @BlrCityPolice @blrcitytraffic @acpeasttraffic @acpwfieldtrf @halairporttrfps @wftrps @mahadevapuratrf @wftrps @DCPSouthTrBCP pic.twitter.com/4X4JrqgzLl
— DCP Traffic East ಉಪ ಪೊಲೀಸ್ ಆಯುಕ್ತರು ಸಂಚಾರ ಪೂರ್ವ (@DCPTrEastBCP) August 5, 2024
ನೈಸ್ ರಸ್ತೆಯಲ್ಲಿ ದ್ವಿಚಕ್ರ ವಾಹನ ನಿಷೇಧ
ನೈಸ್ ರಸ್ತೆಯಲ್ಲಿ ಎಲ್ಲ ದಿನ ರಾತ್ರಿ 10 ರಿಂದ ಬೆಳಗಿನ ಜಾವ 5 ಗಂಟೆಯವರೆಗೆ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಈ ಹೊಸ ನಿಯಮ ಆಗಸ್ಟ್ 2 ರಿಂದ ಜಾರಿಗೆ ಬಂದಿದೆ.
ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್ ಕಡಿಮೆ ಮಾಡಲು ಸಿದ್ಧವಾಗಲಿವೆ 17 ಸಿಗ್ನಲ್ ಮುಕ್ತ ಕಾರಿಡಾರ್‌ಗಳು
ಭಾರಿ ಸರಕು ವಾಹನಗಳು ರಸ್ತೆಗಳಲ್ಲಿ ಸಂಚರಿಸಲು ಸಮಯ ನಿಗದಿ
ಭಾರಿ ಸರಕು ವಾಹನಗಳು ಬೆಂಗಳೂರಿನ ರಸ್ತೆಯಲ್ಲಿ ಸಂಚರಿಸಲು ಸಮಯ ನಿಗದಿ ಮಾಡಲಾಗಿದೆ. ವಾರದ ಎಲ್ಲ ದಿನಗಳಲ್ಲಿ ಬೆಳಗ್ಗೆ 7 ರಿಂದ 11 ಮತ್ತು ಸಂಜೆ 4 ರಿಂದ 10ರವರೆಗೆ ಭಾರಿ ಸರಕು ವಾಹನಗಳು ಬೆಂಗಳೂರು ಮಹಾನಗರದ ಒಳಗಿನ ರಸ್ತೆಗಳಲ್ಲಿ ಸಂಚರಿಸುವಂತಿಲ್ಲ. ಆದರೆ, ಎಲ್ಲ ಶನಿವಾರಗಳಂದು ಬೆಳಗ್ಗೆ 10:30 ರಿಂದ ಮಧ್ಯಾಹ್ನ 2:30ರವರೆಗೆ ಹಾಗೂ ಸಂಜೆ 4:30 ರಿಂದ ರಾತ್ರಿ 9ಗಂಟೆಯವರೆಗೆ ನಿಷೇಧಿಸಿ ಮಾರ್ಪಾಡು ಮಾಡಲಾಗಿದೆ. ಈ ಹೊಸ ನಿಯಮ ಈಗಾಗಲೇ ಜಾರಿಯಾಗಿದೆ. ಇನ್ನುಳಿದಂತೆ ವಾರದ ಆರು ದಿನಗಳಲ್ಲಿ ಮೊದಲಿನಂತೆಯೇ ಮುಂದುವರೆಯಲಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ