ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆಯೇ ತರಕಾರಿ, ಹೂ, ಹಣ್ಣುಗಳ ಬೆಲೆ ಏರಿಕೆ; ಇಲ್ಲಿದೆ ದರ ಪಟ್ಟಿ
Vegetable Price in Bangalore Today; ಶ್ರಾವಣ ಮಾಸ ಆರಂಭವಾಗಿದ್ದು, ಸಾಲು ಸಾಲು ಹಬ್ಬಗಳಿಗೆ ದಿನಗಣನೆ ಆರಂಭವಾಗಿದೆ. ಇದರ ಬೆನ್ನಲ್ಲೇ ಹಬ್ಬಕ್ಕೆ ಬೇಕಾದ ಎಲ್ಲಾ ವಸ್ತುಗಳ ದರ ಒಂದೇ ವಾರದಲ್ಲಿ ಡಬಲ್ ಆಗಿ ಹೋಗಿವೆ. ಬೆಂಗಳೂರಿನಲ್ಲಿ ತರಕಾರಿ, ಹಣ್ಣು ಹಂಪಲು ದರ ತುಟ್ಟಿಯಾಗಿವೆ. ಪರಿಷ್ಕೃತ ದರ ವಿವರ ಇಲ್ಲಿದೆ.
ಬೆಂಗಳೂರು, ಆಗಸ್ಟ್ 6: ದಿನದಿಂದ ದಿನಕ್ಕೆ ಆಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದೆ. ತರಕಾರಿ ಬೆಲೆಗೆಂತೂ ಮೂಗುದಾರವೇ ಇಲ್ಲದಂತಾಗಿದೆ. ಇಷ್ಟು ದಿನ ಮಳೆ ಕಾರಣದಿಂದ ಬೆಲೆ ಏರಿಕೆ ಮಾಡಿದ್ದ ವ್ಯಾಪಾರಸ್ಥರು, ಇದೀಗ ಶ್ರಾವಣ ಮಾಸ ಆರಂಭವಾಗಿದೆ ಎನ್ನುವ ಕಾರಣಕ್ಕೆ ಹೂ, ಹಣ್ಣು, ತರಕಾರಿಗಳ ಬೆಲೆ ಏರಿಕೆ ಮಾಡಿದ್ದಾರೆ. ಹೀಗಾಗಿ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ತರಕಾರಿಗಳ ಬೆಲೆ 10 ರಿಂದ 20 ರೂಪಾಯಿ ಏರಿಕೆಯಾಗಿದ್ದು, ಹೂವಿನ ಬೆಲೆ 200 ರೂಪಾಯಿಯಷ್ಟು ಏರಿಕೆಯಾಗಿದೆ.
ಶ್ರಾವಣಮಾಸ ಆಭವಾಗುತ್ತಿದ್ದಂತೆಯೇ ನಾಗಾರ ಪಂಚಮಿ, ವರಮಹಲಕ್ಷ್ಮಿ, ಶ್ರಾವಣ ಶನಿವಾರ, ಗೌರಿ – ಗಣೇಶ ಚತುರ್ಥಿಗಳು ಒಂದರ ಮೇಲೊಂದು ಬರುತ್ತಲೇ ಇರುತ್ತವೆ. ಈ ಅವಧಿಯಲ್ಲಿ ತರಕಾರಿ, ಹೂ, ಹಣ್ಣುಗಳಿಗೆ ಬೇಡಿಕೆ ಹೆಚ್ಚು. ಹೀಗಾಗಿ ತರಕಾರಿಗಳ ಬೆಲೆ ದುಪ್ಪಟ್ಟಾಗಿ ಹೋಗಿವೆ. ಟೊಮೆಟೊ, ಈರುಳ್ಳಿ, ಬೆಳ್ಳಳ್ಳಿ, ಆಲೂಗಡ್ಡೆ, ಕ್ಯಾರೆಟ್ ಬಿಟ್ರೂಟ್ ಬೆಲೆ ವಿಪರೀತ ಜಾಸ್ತಿಯಾಗಿದೆ.
ತರಕಾರಿ ಬೆಲೆ ಪಟ್ಟಿ (ಕೆಜಿಗೆ ರೂಪಾಯಿಗಳಲ್ಲಿ)
ತರಕಾರಿ | ಬೆಲೆ |
ನಾಟಿ ಬೀನ್ಸ್ | 100 |
ಟೊಮೆಟೊ | 50 |
ಬಿಳಿ ಬದನೆ | 120 |
ಮೆಣಸಿನಕಾಯಿ | 80 |
ನುಗ್ಗೆಕಾಯಿ | 200 |
ಊಟಿ ಕ್ಯಾರೆಟ್ | 200 |
ನವಿಲುಕೋಸು | 60 |
ಮೂಲಂಗಿ | 60 |
ಹೀರೇಕಾಯಿ | 80 |
ಆಲೂಗಡ್ಡೆ | 60 |
ಈರುಳ್ಳಿ | 60 |
ಕ್ಯಾಪ್ಸಿಕಂ | 85 |
ಹಾಗಲಕಾಯಿ | 85 |
ಕೊತ್ತಂಬರಿ ಸೊಪ್ಪು | 70 |
ಶುಂಠಿ | 185 |
ಬೆಳ್ಳುಳ್ಳಿ | 350 |
ಪಾಲಕ್ | 46 |
ಪುದಿನ | 92 |
ನಾಟಿ ಬಟಾಣಿ | 300 |
ಫಾರಂ ಬಟಾಣಿ | 200 |
ಹಣ್ಣುಗಳ ಬೆಲೆ ಪಟ್ಟಿ (ಕೆಜಿಗೆ ರೂಪಾಯಿಗಳಲ್ಲಿ)
ಹಣ್ಣು | ಬೆಲೆ |
ಸೇಬು | 350 |
ದ್ರಾಕ್ಷಿ | 300 |
ಮೂಸಂಬಿ | 140 |
ಸಪೋಟ | 200 |
ಡ್ರಾಗಾನ್ ಪ್ರೋಟ್ | 200 |
ಬಟರ್ ಫ್ರೋಟ್ | 250 |
ಏಲಕ್ಕಿ ಬಾಳೆಹಣ್ಣು | 80 |
ಪೊಪ್ಪಾಯ | 50 |
ಕಲ್ಲಂಗಡಿ | 50 |
ಅನಾನಸ್ | 120 |
ಕಿವಿ ಫ್ರೋಟ್ | 120 |
ಕಿತ್ತಳೆ | 200 |
ಹೂಗಳ ಬೆಲೆ ಹೀಗಿದೆ
ಸೇವಂತಿಗೆ 250, ಗುಲಾಬಿ 200, ಅಣಗಲು 200, ಸುಗಂದರಾಜ 100, ಮಲ್ಲಿಗೆ 300, ಕನಕಾಂಬರ 300, ಚೆಂಡೂ ಹೂ 20, ತುಳುಸಿ 40, ವೈಟ್ ಸೇವಂತಿಗೆ 150, ಹಳದಿ ಸೇವಂತಿಗೆ ಮೊಳಕ್ಕೆ 250, ಕಾಕಡ ಕೆಜಿಗೆ 400, ಸಂಪಿಗೆ 200 ರೂ. ಇದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆ, ಹಲವೆಡೆ ನಾನಾ ಸಮಸ್ಯೆ, ವಾಹನ ಸವಾರರ ಪರದಾಟ
ತರಕಾರಿ, ಹಣ್ಣುಗಳ ಜತೆ ಹೂಗಳ ಬೆಲೆ ಸಿಕ್ಕಾಪಟ್ಟೆ ದುಬಾರಿಯಾಗಿದೆ. ಹಬ್ಬಗಳ ಕಾರಣದಿಂದ ಈ ವಾರ ಕೊಂಚ ಬೆಲೆ ಏರಿಕೆಯಾಗಿದೆ ಎನ್ನುತ್ತಿದ್ದಾರೆ ವ್ಯಾಪಾರಸ್ಥರು. ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸದ್ಯ ಮಳೆ ಇರುವ ಕಾರಣ ತರಕಾರಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿಲ್ಲ. ಜೊತೆಗೆ ಹೂಗಳೂ ಕಡಿಮೆ ಪ್ರಮಾಣದಲ್ಲಿ ಬರುತ್ತಿವೆ. ಹೀಗಾಗಿ ಬೆಲೆ ಏರಿಕೆಯಾಗುತ್ತಿದೆ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:39 am, Tue, 6 August 24