ಕಾರ್ಕಳದಲ್ಲಿ ವಯನಾಡು ಮಾದರಿ ದುರಂತದ ಭೀತಿ: ಗುಡ್ಡಕುಸಿತದ ಆತಂಕದಲ್ಲಿ ಗ್ರಾಮಸ್ಥರು!

Edited By:

Updated on: Aug 07, 2026 | 2:52 PM

ಮುಖ್ಯಾಂಶಗಳು

  • ಕಾರ್ಕಳ ತಾಲೂಕಿನ ರೇಂಜಾಳದಲ್ಲಿ ಭೂ ಕುಸಿತದ ಆತಂಕ
  • ಗುಡ್ಡದ ಮೇಲಿನಿಂದ ಕ್ಷಣಕ್ಷಣಕ್ಕೂ ಜಾರುತ್ತಿರುವ ಮಣ್ಣು
  • ಭೂಕುಸಿತ ಹಿನ್ನೆಲೆ ಮನೆಯನ್ನ ಬಿಟ್ಟು ಹೋಗುತ್ತಿರುವ ನಿವಾಸಿಗಳು

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಹೆಡ್ಮೆ ಗ್ರಾಮದಲ್ಲಿ ಭೂಕುಸಿತದ ಭೀತಿ ಎದುರಾಗಿದೆ. ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಕ್ಷಣಕ್ಷಣಕ್ಕೂ ಜಾರಿ ಬರುತ್ತಿದ್ದು, ಮೂರಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ವಯನಾಡ್ ಮಾದರಿಯ ದುರಂತದ ಆತಂಕದಲ್ಲಿದ್ದು, ಸ್ಥಳಾಂತರ ಮತ್ತು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸ್ಥಳೀಯರು ಆಡಳಿತಕ್ಕೆ ಮನವಿ ಮಾಡಿದ್ದಾರೆ.

ಉಡುಪಿ, ಆಗಸ್ಟ್​​ 07: ಜಿಲ್ಲೆಯ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಡ್ಮೆ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಸುಮಾರು ಒಂದು ಎಕರೆಗಿಂತಲೂ ಅಧಿಕ ಜಾಗದಲ್ಲಿ ಬಿರುಕು ಬಿಟ್ಟಿದೆ. ಭೂಕುಸಿತದ ಭೀತಿ ಎದುರಾಗಿದ್ದು, ಕ್ಷಣಕ್ಷಣಕ್ಕೂ ಗುಡ್ಡದಿಂದ ಮಣ್ಣು ಜಾರುತ್ತಿರುವುದರಿಂದ ಸ್ಥಳೀಯ ನಿವಾಸಿಗಳಲ್ಲಿ ತೀವ್ರ ಆತಂಕ ಮನೆಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಅಧಿಕಾರಿಗಳು ಸ್ಥಳೀಯ ಕುಟುಂಬಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದರೂ, ಪರ್ಯಾಯ ವಸತಿ ಹಾಗೂ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ವಯನಾಡು ಮಾದರಿಯ ದುರಂತ ಸಂಭವಿಸುವ ಮುನ್ನವೇ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ತಕ್ಷಣವೇ ಸೂಕ್ತ ರಕ್ಷಣೆ ಮತ್ತು ಪುನರ್ವಸತಿ ವ್ಯವಸ್ಥೆ ಮಾಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us