ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​ ಜಾಮ್​

ಮಧ್ಯಾಹ್ನವಾದರೂ ತುಮಕೂರು-ಶಿರಾ ಹೆದ್ದಾರಿಯಲ್ಲಿ ಕ್ಲಿಯರ್​ ಆಗದ ಟ್ರಾಫಿಕ್​​​ ಜಾಮ್​

ವಿವೇಕ ಬಿರಾದಾರ
|

Updated on: Oct 14, 2024 | 12:15 PM

ರಾಷ್ಟ್ರೀಯ ಹೆದ್ದಾರಿ 48 ತುಮಕೂರು-ಶಿರಾ ಮಾರ್ಗದ ಐದು ಕಡೆ ಟ್ರಾಫಿಕ್ ಜಾಮ್​ ಆಗಿದೆ. ಭಾನುವಾರ ಮಧ್ಯಾಹ್ನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್​ ಆಗಿದ್ದು, ಇನ್ನುವರೆಗೂ ಕ್ಲಿಯರ್​ ಆಗಿಲ್ಲ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 48 ತುಮಕೂರು-ಶಿರಾ (Tumakur-Sira) ಮಾರ್ಗದ ಐದು ಕಡೆ ಟ್ರಾಫಿಕ್ ಜಾಮ್​ (Traffic Jam) ಆಗಿದೆ. ಭಾನುವಾರ ಮಧ್ಯಾಹ್ನದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ (National Highway) ಟ್ರಾಫಿಕ್ ಜಾಮ್​ ಆಗಿದ್ದು, ಇನ್ನುವರೆಗೂ ಕ್ಲಿಯರ್​ ಆಗಿಲ್ಲ. ಇದರಿಂದ ವಾಹನ ಸವಾರರು ಹೈರಾಣಾಗಿದ್ದಾರೆ. ಆಂಬುಲೆನ್ಸ್​​ಗಳು ಸಹ ಟ್ರಾಫಿಕ್​ನಲ್ಲಿ ಸಿಲುಕಿದ್ದವು. ಐದು ಕಡೆಗಳಲ್ಲಿ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ.

ಹಬ್ಬ ಮುಗಿಸಿ ಜನರು ಭಾನುವಾರ ಬೆಂಗಳೂರಿನತ್ತ ಮುಖ ಮಾಡಿದ್ದಾರೆ. ಏಕಾಏಕಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ಬಂದ ಹಿನ್ನೆಲೆಯಲ್ಲಿ 2-3 ಕಿ.ಮಿ. ಉದ್ದ ಟ್ರಾಫಿಕ್ ಜಾಮ್​ ಆಗಿತ್ತು. ಇದರಿಂದ ಬೆಳಗ್ಗೆ 5 ಗಂಟೆಗೆ ತಮಕೂರಿಗೆ ಬಂದ ವಾಹನಗಳು, ಬೆಂಗಳೂರು ಪ್ರವೇಶಿಸಲು ಜನರು ಪರದಾಡಿದರು. ತುಮಕೂರಿನ ಊರುಕೆರೆ ಬಳಿ, ಬೆಳ್ಳಾವಿ ಕ್ರಾಸ್ ಬಳಿ, ನೆಲಹಾಲ್ ಸಮೀಪ, ಕಳ್ಳಂಬೆಳ್ಳ ಸಮೀಪದಲ್ಲಿ ಎರಡು ಸೇತುವೆ ಕಾಮಗಾರಿ ನಡೆಯುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ