Video: ಮೈಯಿಂದ ತೊಟ್ಟಿಕ್ಕುತ್ತಿತ್ತು ರಕ್ತ, ಅಸಹಾಯಕ ಸ್ಥಿತಿಯಲ್ಲಿ ಕುಳಿತ ನೇಪಾಳ ಮಾಜಿ ಪ್ರಧಾನಿ ಶೇರ್ ಬಹದ್ದೂರ್
ನೇಪಾಳದ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡಿದ ಬಳಿಕವೂ ಶಾಂತ ಸ್ಥಿತಿ ಮರಳಲಿಲ್ಲ, ಪ್ರತಿಭಟನಾಕಾರರು ಹಿಂಸಾಚಾರವನ್ನು ಮುಂದುವರೆಸಿದ್ದಾರೆ. ಮಾಜಿ, ಸಚಿವರು, ಮಾಜಿ ಪ್ರಧಾನಿಗಳು ಎಲ್ಲರ ಮೇಲೂ ಹಲ್ಲೆ ನಡೆಸಲಾಗಿದೆ. ಸಂಸತ್ ಭವನ, ಮಾಜಿ ಪ್ರಧಾನಿಗಳ ಮನೆ ಸೇರಿ ಹಲವರ ಮನೆಯನ್ನು ಭಸ್ಮಗೊಳಿಸಿದ್ದಾರೆ. ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ಮೇಲೂ ಹಲ್ಲೆ ನಡೆಸಿದ್ದು, ಮೈಯಿಂದ ರಕ್ತ ತೊಟ್ಟಿಕ್ಕುತ್ತಿದೆ, ಅಸಹಾಯಕರಾಗಿ ಒಂದೆಡೆ ಕುಳಿತಿದ್ದಾರೆ.
ಕಠ್ಮಂಡು, ಸೆಪ್ಟೆಂಬರ್ 10: ನೇಪಾಳದ ಪ್ರಧಾನಿ ಕೆಪಿ ಶರ್ಮಾ ಓಲಿ ರಾಜೀನಾಮೆ ನೀಡಿದ ಬಳಿಕವೂ ಶಾಂತ ಸ್ಥಿತಿ ಮರಳಲಿಲ್ಲ, ಪ್ರತಿಭಟನಾಕಾರರು ಹಿಂಸಾಚಾರವನ್ನು ಮುಂದುವರೆಸಿದ್ದಾರೆ. ಮಾಜಿ, ಸಚಿವರು, ಮಾಜಿ ಪ್ರಧಾನಿಗಳು ಎಲ್ಲರ ಮೇಲೂ ಹಲ್ಲೆ ನಡೆಸಲಾಗಿದೆ. ಸಂಸತ್ ಭವನ, ಮಾಜಿ ಪ್ರಧಾನಿಗಳ ಮನೆ ಸೇರಿ ಹಲವರ ಮನೆಯನ್ನು ಭಸ್ಮಗೊಳಿಸಿದ್ದಾರೆ. ಮಾಜಿ ಪ್ರಧಾನಿ ಶೇರ್ ಬಹದ್ದೂರ್ ದೇವುಬಾ ಅವರ ಮೇಲೂ ಹಲ್ಲೆ ನಡೆಸಿದ್ದು, ಮೈಯಿಂದ ರಕ್ತ ತೊಟ್ಟಿಕ್ಕುತ್ತಿದೆ, ಅಸಹಾಯಕರಾಗಿ ಒಂದೆಡೆ ಕುಳಿತಿದ್ದಾರೆ. ಬಳಿಕ ಸೇನೆಯು ಪ್ರತಿಭಟನಾಕಾರರಿಂದ ಅವರನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.ಬುಡನಿಲ್ಕಾಂತದಲ್ಲಿರುವ ದೇವುಬಾ ಅವರ ನಿವಾಸಕ್ಕೆ ನುಗ್ಗಿ, ಮನೆಗೆ ಬೆಂಕಿ ಹಚ್ಚಿದ್ದಾರೆ. ಜೀವ ಉಳಿಸಿಕೊಳ್ಳಲು ಮಾಜಿ ಪ್ರಧಾನಿ ಮನೆಯಿಂದ ಹೊರಗೆ ಓಡಿದ್ದಾರೆ. ಅಲ್ಲಿ ಅವರ ಮೇಲೆ ಗಂಭೀರವಾಗಿ ಹಲ್ಲೆ ನಡೆಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

