ಡ್ರಗ್ಸ್​ ಪಾರ್ಟಿ ಕೇಸ್​ನಲ್ಲಿ ಅರೆಸ್ಟ್​ ಆಗುವಾಗ ಮಾಧ್ಯಮಗಳ ಮೇಲೆ ನಟಿ ಹೇಮಾ ಗರಂ

| Updated By: ಮದನ್​ ಕುಮಾರ್​

Updated on: Jun 03, 2024 | 8:08 PM

ರೇವ್​ ಪಾರ್ಟಿ ಮಾಡಿದ ಆರೋಪದಲ್ಲಿ ತೆಲುಗು ನಟಿ ಹೇಮಾ ಅವರನ್ನು ಬೆಂಗಳೂರಿನಲ್ಲಿ ಇಂದು (ಜೂನ್​ 3) ಬಂಧಿಸಲಾಗಿದೆ. ವೈದ್ಯಕೀಯ ಪರೀಕ್ಷೆಗಾಗಿ ಅವರ ರಕ್ತ, ಮೂತ್ರ, ಉಗುರು, ಕೂದಲಿನ ಸ್ಯಾಂಪಲ್​ ಸಂಗ್ರಹಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಆಸ್ಪತ್ರೆಯಿಂದ ಹೊರಬರುವಾಗ ಮಾಧ್ಯಮಗಳ ಕ್ಯಾಮೆರಾ ನೋಡಿ ಹೇಮಾ ಡ್ರಾಮಾ ಮಾಡಿದ್ದಾರೆ.

ತೆಲುಗು ನಟಿ ಹೇಮಾ (Telugu Actress Hema) ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ‘ನಿಮ್ಮ ಸುದ್ದಿಯೆಲ್ಲ ತಪ್ಪು. ನನ್ನನ್ನು ಈಗಷ್ಟೇ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಈಗ ನನ್ನ ಕೂದಲು, ಉಗುರು, ಮೂತ್ರ, ರಕ್ತದ ಮಾದರಿ ತೆಗೆದುಕೊಂಡಿದ್ದಾರೆ. ಅದರಲ್ಲಿ ಪಾಸಿಟಿವ್​ ಬರತ್ತೋ, ನೆಗೆಟಿವ್​ ಬರತ್ತೋ ಅನ್ನೋದೆಲ್ಲ ಆಮೇಲೆ. ಅರ್ಥ ಆಯ್ತಾ? ನೀವು ತೋರಿಸುತ್ತಿರುವ ಸುದ್ದಿಯೆಲ್ಲ ಸುಳ್ಳು. ಇದು ನೀವು ಮಾಡುವ ಕೆಲಸ’ ಎಂದು ಮಾಧ್ಯಮಗಳ ಎದುರು ನಟಿ ಹೇಮಾ ಕೂಗಾಡಿದ್ದಾರೆ. ರೇವ್​ ಪಾರ್ಟಿ ಮಾಡಿದ ಆರೋಪದಲ್ಲಿ ಹೇಮಾ ಅವರ ಬಂಧನ (Hema Arrest) ಆಗಿದೆ. ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಇಂದು (ಜೂನ್​ 3) ಹೇಮಾರನ್ನು ಅರೆಸ್ಟ್​ ಮಾಡಿದ ಬಳಿಕ ವೈದ್ಯಕೀಯ ಪರೀಕ್ಷೆಗಾಗಿ ರಕ್ತ, ಮೂತ್ರ, ಉಗುರು, ಕೂದಲಿನ ಮಾದರಿ ಸಂಗ್ರಹಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮುಗಿದ ನಂತರ ಆಸ್ಪತ್ರೆಯಿಂದ ಹೊರಬರುವಾಗ ಮಾಧ್ಯಮಗಳ ಕ್ಯಾಮೆರಾ ಕಂಡು ಹೇಮಾ ಅವರು ಡ್ರಾಮಾ ಮಾಡಿದ್ದಾರೆ. ಕೆಲವು ದಿನಗಳ ಹಿಂದೆ ಎಲೆಕ್ಟ್ರಾನಿಕ್​ ಸಿಟಿಯ ಜಿ.ಆರ್​. ಫಾರ್ಮ್​ಹೌಸ್​ನಲ್ಲಿ ರೇವ್​ ಪಾರ್ಟಿ (Rave Party) ಮಾಡುವಾಗ ಹೇಮಾ ಸಿಕ್ಕಿ ಬಿದ್ದಿದ್ದರು. ಅದರ ವಿಚಾರಣೆ ಸಲುವಾಗಿ ಅವರನ್ನು ಬಂಧಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.