ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಹಿ ಹಾಕಿಸಿಕೊಂಡಿದ್ದಾರೆ: ಪೊಲೀಸರ ವಿರುದ್ಧ ಹೇಮಾ ಆರೋಪ
ಬೆಂಗಳೂರು ರೇವ್ ಪಾರ್ಟಿಗೆ ಹಾಜರಾಗಿ ಡ್ರಗ್ಸ್ ಸೇವಿಸಿದ್ದ ನಟಿ ಹೇಮಾ ಕೊಲ್ಲ ಅವರನ್ನು ಪೊಲೀಸರು ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರು ಮಾಡಬೇಕಾದರೆ ಪೊಲೀಸರ ವಿರುದ್ಧ ನಟಿ ಹೇಮಾ ಆರೋಪ ಮಾಡಿದ್ದಾರೆ. ವಿಡಿಯೋ ಇಲ್ಲಿದೆ.
ಬೆಂಗಳೂರಿನ ಎಲೆಲ್ಟ್ರಾನಿಕ್ ಸಿಟಿಯ ಹೊರವಲಯದಲ್ಲಿನ ಫಾರಂ ಹೌಸ್ ಒಂದರಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಭಾಗಿಯಾಗಿದ್ದ ನಟಿ ಹೇಮಾ (Hema Kolla) ಡ್ರಗ್ಸ್ ಸೇವಿಸಿದ್ದು ಖಾತ್ರಿಯಾಗಿದ್ದು ನಟಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಂದು (ಜೂನ್ 05) ನಟಿ ಹೇಮಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯ್ತು. ಈ ವೇಳೆ ಮಾಧ್ಯಮದವರ ಎದುರು ಮಾತನಾಡಿದ ನಟಿ ಹೇಮಾ, ನನ್ನನ್ನು ಅರ್ಧರಾತ್ರಿ ಬಂಧಿಸುವ ಅಗತ್ಯವೇನಿತ್ತು, ನಾನೇನು ಕೊಲೆ ಮಾಡಿದ್ದೀನಾ? ನನ್ನನ್ನು ಕಗ್ಗತ್ತಲೆಯಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಸಹಿ ಹಾಕಿಸಿಕೊಂಡಿದ್ದಾರೆ ಈ ಪೊಲೀಸರು. ಆಗ ಮಾತನಾಡುತ್ತಿದ್ದಿರಲ್ಲ, ಈಗ ಮಾತನಾಡಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಉತ್ತರ ಪ್ರದೇಶ ಕಾಂಗ್ರೆಸ್ ರಾಜ್ಯಾಧ್ಯಕ್ಷ ಅಜಯ್ ರೈ ಮೇಲೆ ಶೂ ಅಟ್ಯಾಕ್
ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿದ ಮೈಸೂರು: ನೋಡ ನೋಡ ಎಷ್ಟು ಚಂದ ಅಲಾ
ಸ್ಟಿಂಗ್ ಆಪರೇಷನ್ ಯಾರು ಮಾಡುತ್ತಿದ್ದಾರೆಂದು ಗೊತ್ತಿದೆ ಎಂದ ಸಿದ್ದರಾಮಯ್ಯ
ಸ್ಟಿಂಗ್ ಆಪರೇಷನ್ ಮಾಂತ್ರಿಕ ಯಾರು? ಹೋಟೆಲ್ ಸೀಕ್ರೆಟ್ ಬಿಚ್ಚಿಟ್ಟ ಕುಮಾರಣ್ಣ

