ಡಿಕೆಶಿ ದಿಢೀರ್ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ಯಾಕೆ? ಇದರ ಹಿಂದಿದೆ ರಾಜಕೀಯ ಲೆಕ್ಕಾಚಾರ
ಡಿಸಿಎಂ ಡಿಕೆ ಬೆಂಬಲಿಗರು ದೆಹಲಿಯಿಂದ್ಲೇ ದಾಳ ಉರುಳಿಸಿದ್ರೆ, ಸಿದ್ದರಾಮಯ್ಯ ಆಪ್ತರು, ಔತಣಕೂಟ ನೆಪದಲ್ಲಿ ಪ್ರತಿದಾಳ ಉರುಳಿಸಿದ್ದಾರೆ. ಇನ್ನು ಸ್ವತಃ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಖುದ್ದು ಮಾಧ್ಯಮಗಳ ಮುಂದೆ ಬಂದು ಬದಲಾವಣೆಯ ಬಗ್ಗೆ ಮುಕ್ತವಾಗಿ ಮಾತನಾಡೋದಕ್ಕೆ ಶುರು ಮಾಡಿದ್ದು, ತಮ್ಮದೇ ದಾಟಿಯಲ್ಲಿ, ತಮ್ಮದೇ ತಂತ್ರದ ಮಾತುಗಳನ್ನ ಆಡ್ತಿದ್ದಾರೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ದಿಢೀರ್ ಬೆಂಗಳೂರಿನ ಅಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ.
ಬೆಂಗಳೂರು, (ನವೆಂಬರ್ 21): ಆರು ತಿಂಗಳಿಂದ್ಲೂ ಸಿಎಂ ಕುರ್ಚಿಗಾಗಿ ಚರ್ಚೆ ನಡೆಯುತ್ತಲೇ ಇತ್ತು. ಆದ್ರೆ ಈ ಬೆಳವಣಿಗೆ ಸದ್ಯ ತೀವ್ರ ಸ್ವರೂಪ ಪಡೆದಿದೆ. ಹೌದು…ನಾಯಕರ ಸಿಎಂ ಪಟ್ಟದ ಆಟ ಬರೀ ಮಾತುಗಳಿಗೆ ಅಷ್ಟೇ ಸೀಮಿತವಾಗಿಲ್ಲ. ಸನ್ನೆ ಹಾಗೂ ಸೂಚನೆ ಮೂಲಕವೂ ಚುರುಕಾಗಿದೆ. ಡಿಸಿಎಂ ಡಿಕೆ ಬೆಂಬಲಿಗರು ದೆಹಲಿಯಿಂದ್ಲೇ ದಾಳ ಉರುಳಿಸಿದ್ರೆ, ಸಿದ್ದರಾಮಯ್ಯ ಆಪ್ತರು, ಔತಣಕೂಟ ನೆಪದಲ್ಲಿ ಪ್ರತಿದಾಳ ಉರುಳಿಸಿದ್ದಾರೆ. ಇನ್ನು ಸ್ವತಃ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಖುದ್ದು ಮಾಧ್ಯಮಗಳ ಮುಂದೆ ಬಂದು ಬದಲಾವಣೆಯ ಬಗ್ಗೆ ಮುಕ್ತವಾಗಿ ಮಾತನಾಡೋದಕ್ಕೆ ಶುರು ಮಾಡಿದ್ದು, ತಮ್ಮದೇ ದಾಟಿಯಲ್ಲಿ, ತಮ್ಮದೇ ತಂತ್ರದ ಮಾತುಗಳನ್ನ ಆಡ್ತಿದ್ದಾರೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್ ಅವರು ದಿಢೀರ್ ಬೆಂಗಳೂರಿನ ಅಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದಾರೆ.
ಹೌದು… ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಧಾರವಾಡ ಕೈ ಶಾಸಕ ವಿನಯ್ ಕುಲಕರ್ಣಿ ಹಾಗೂ ಚಿತ್ರದುರ್ಗ ಶಾಸಕ ವೀರೇಂದ್ರ ಪಪ್ಪಿ ಅವರನ್ನು ಡಿಕೆ ಶಿವಕುಮಾರ್ ಭೇಟಿ ಮಾಡಿದ್ದಾರೆ. ಈ ಮೂಲಕ ಅವರ ವಿಶ್ವಾಸ ಪಡೆದುಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿಎಂ ಕುರ್ಚಿಗಾಗಿ ನಂಬರ್ ಗೇಮ್ ಏನಾದರೂ ಮುನ್ನಲೆಗೆ ಬಂದರೆ ಸಹಾಯಕವಾಗಲಿದೆ ಎನ್ನುವ ಲೆಕ್ಕಾಚಾರದೊಂದಿಗೆ ಇಬ್ಬರು ಶಾಸರಕರನ್ನು ಭೇಟಿ ಮಾಡಿದ್ದಾರೆ.
