ಜೈಲಿನ ವಿಡಿಯೋ ವೈರಲ್ ಬಗ್ಗೆ ದರ್ಶನ್ ಆಪ್ತ ಧನ್ವೀರ್ಗೆ ಪೊಲೀಸರ ಡ್ರಿಲ್
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್ ಇಂದು (ನ.21) ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ನವೆಂಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗದೇ ವಕೀಲರ ಮೂಲಕ ಅವರು ಕಾಲಾವಕಾಶ ಕೇಳಿದ್ದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಡಿಯೋ ವೈರಲ್ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಧನ್ವೀರ್ (Dhanveer) ಇಂದು (ನವೆಂಬರ್ 21) ಪೊಲೀಸರ ಮುಂದೆ ವಿಚಾರಣೆಗೆ ಹಾಜರಾದರು. ನವೆಂಬರ್ 13ರಂದು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗಿತ್ತು. ಆದರೆ ವಿಚಾರಣೆಗೆ ಹಾಜರಾಗದೇ ವಕೀಲರ ಮೂಲಕ ಕಾಲಾವಕಾಶ ಕೇಳಿದ್ದರು. ಕಳೆದ ಸೋಮವಾರ ಠಾಣೆ ಬಳಿ ಬಂದರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ಊಟ ಮಾಡಿಕೊಂಡು ಬರಲು ಹೇಳಿದ್ರೆ ವಾಪಸ್ ಬಂದಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಧನ್ವೀರ್ ವಿಚಾರಣೆಗೆ ಗೈರಾಗಿದ್ದರು. ದರ್ಶನ್ (Darshan) ಆಪ್ತನಾಗಿ ಧನ್ವೀರ್ ಅವರು ಗುರುತಿಸಿಕೊಂಡಿದ್ದಾರೆ. ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ (Parappana Agrahara) ಪೊಲೀಸ್ ಠಾಣೆಗೆ ಆಗಮಿಸಿದ ಧನ್ವೀರ್ ಅವರಿಗೆ ಪೊಲೀಸರು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
