ಇದಪ್ಪ ರೂಲ್ಸ್ ಅಂದ್ರೆ: ಸಿಎಂ ಸಿದ್ದರಾಮಯ್ಯ ಹೊಸ ಮನೆಗೂ ಸಿಕ್ಕಿಲ್ಲ ವಿದ್ಯುತ್ ಸಂಪರ್ಕ
ರೂಲ್ಸ್ ಅಂದ್ರೆ ರೂಲ್ಸ್ ದೇಶದ ಪ್ರತಿ ಪ್ರಜೆಗೂ ಒಂದೇ ರೂಲ್ಸ್. ಮುಖ್ಯಮಂತ್ರಿ (Chief Minister) ಆಗ್ಲಿ ಮಿನಿಸ್ಟರ್ ಆಗಲಿ ಎಲ್ಲರಿಗೂ ಸಹ ಒಂದೇ ರೂಲ್ಸ್ ಅನ್ವಯ. ಇದನ್ನು ಏಕೆ ಹೇಳುತ್ತಿದ್ದೇವೆ ಅಂದ್ರೆ ಮೈಸೂರಿನ ಕುವೆಂಪು ನಗರದಲ್ಲಿ (Kuvempu Nagara) ನಿರ್ಮಾಣಗೊಂಡಿರುವ ಸಿದ್ದರಾಮಯ್ಯ (Siddaramaiah) ಅವರ ಹೊಸ ನಿವಾಸಕ್ಕೆ ವಿದ್ಯುತ್ ಸಂಪರ್ಕಕ್ಕೆ ತೊಡಕು ಉಂಟಾಗಿದೆ.
ಮೈಸೂರು (ನವೆಂಬರ್ 21): ರೂಲ್ಸ್ ಅಂದ್ರೆ ರೂಲ್ಸ್ ದೇಶದ ಪ್ರತಿ ಪ್ರಜೆಗೂ ಒಂದೇ ರೂಲ್ಸ್. ಮುಖ್ಯಮಂತ್ರಿ (Chief Minister) ಆಗ್ಲಿ ಮಿನಿಸ್ಟರ್ ಆಗಲಿ ಎಲ್ಲರಿಗೂ ಸಹ ಒಂದೇ ರೂಲ್ಸ್ ಅನ್ವಯ. ಇದನ್ನು ಏಕೆ ಹೇಳುತ್ತಿದ್ದೇವೆ ಅಂದ್ರೆ ಮೈಸೂರಿನ ಕುವೆಂಪು ನಗರದಲ್ಲಿ (Kuvempu Nagara) ನಿರ್ಮಾಣಗೊಂಡಿರುವ ಸಿದ್ದರಾಮಯ್ಯ (Siddaramaiah) ಅವರ ಹೊಸ ನಿವಾಸಕ್ಕೆ ವಿದ್ಯುತ್ ಸಂಪರ್ಕಕ್ಕೆ ತೊಡಕು ಉಂಟಾಗಿದೆ. ಇದಕ್ಕೆ ಕಾರಣ ಸುಪ್ರೀಂಕೋರ್ಟಿನ ಆದೇಶ. ಹೌದು… ಹೊಸ ಮನೆಗೆ ವಿದ್ಯುತ್ ನೀರು ಸಂಪರ್ಕಕ್ಕೆ ಓಸಿ (ಸ್ಚಾಧೀನಾನುಭವ ಪ್ರಮಾಣಪತ್ರ) ಕಡ್ಡಾಯವಾಗಿದೆ. ಇದು ಸುಪ್ರೀಂಕೋರ್ಟಿನ ಆದೇಶ. ಇದೀಗ ಈ ಹೊಸ ರೂಲ್ಸ್ ಸಿಎಂ ಸಿದ್ದರಾಮಯ್ಯನವರ ಹೊಸ ಮನೆಗೂ ತಟ್ಟಿದ್ದು.
ಡಿಸೆಂಬರ್‌ನಲ್ಲಿ ಗೃಹಪ್ರವೇಶಕ್ಕೆ ಸಿದ್ದತೆ ನಡೆದಿದ್ದು, ಈ ಸಂಬಂಧ ಎರಡು ತಿಂಗಳ ಹಿಂದೆಯೇ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಲಾಗಿದೆ. ಆದ್ರೆ. ಓಸಿ ಇಲ್ಲದ ಕಾರಣ ವಿದ್ಯುತ್ ಸಂಪರ್ಕ ಸಿಕ್ಕಿಲ್ಲ. ಈ ಬಗ್ಗೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ಮೈಸೂರಿನ ಕುವೆಂಪುನಗರದ ಸಿಎಂ ಸಿದ್ದರಾಮಯ್ಯ ಹೊಸ ಮನೆ ಬಳಿಯಿಂದ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.
