ಗುರುಪ್ರಸಾದ್ ಕಾಲ್ ರಿಸೀವ್ ಮಾಡದೇ ಇದ್ರೂ ಯಾರಿಗೂ ಅನುಮಾನ ಬಂದಿಲ್ಲವೇಕೆ?

Updated on: Nov 04, 2024 | 10:41 PM

ಗುರುಪ್ರಸಾದ್ ಆಪ್ತ ವಾಗೀಶ್ ಕಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡು ಹಲವು ದಿನಗಳು ಕಳೆದು ಹೋಗಿದ್ದವು. ಅನುಮಾನ ಬರದಿರಲು ಕಾರಣ ಏನು ಎಂದು ಗುರುಪ್ರಸಾದ್ ಮಾಹಿತಿ ಹಂಚಿಕೊಂಡಿದ್ದಾರೆ.

ಗುರುಪ್ರಸಾದ್ ಅವರು ಆತ್ಮಹತ್ಯೆ ಮಾಡಿಕೊಂಡು ಹಲವು ದಿನಗಳು ಕಳೆದು ಹೋಗಿದ್ದವು. ಅವರಿಗೆ ಅನೇಕರು ಕರೆ ಮಾಡಿದ್ದರು. ಆದರೆ, ಯಾರ ಕರೆಗೂ ಪ್ರತಿಕ್ರಿಯೆ ಬಂದಿರಲಿಲ್ಲ. ಅವರ ಸಾವಿನ ಬಗ್ಗೆ ಯಾರಿಗೂ ಅನುಮಾನ ಬರಲಿಲ್ಲ. ಅದಕ್ಕೆ ಕಾರಣ ಏನು ಎಂಬುದನ್ನು ಗುರುಪ್ರಸಾದ್ ಆಪ್ತ ವಾಗೀಶ್ ಕಟ್ಟಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಅಕ್ಟೋಬರ 31ಕ್ಕೆ ಎದ್ದೇಳು ಮಂಜುನಾಥ್ ಸೀಕ್ವೆಲ್ಸ್​ನ ವಿಶುವಲ್ಸ್ ರಿಲೀಸ್ ಮಾಡುತ್ತೇನೆ ಎಂದು ಹೇಳಿದ್ದರು. ಆದರೆ, ಗ್ರೂಪ್ ಅಲ್ಲಿ ಬರಲಿಲ್ಲ. ನಾವೆಲ್ಲ ಮೆಸೇಜ್ ಹಾಕಿದ್ದೆವು. ಆದರೆ, ರಿಪ್ಲೈ ಬರಲಿಲ್ಲ. ಜನ್ಮದಿನಕ್ಕೆ ವಿಶ್ ಮಾಡಿದರೂ ರಿಪ್ಲೈ ಬರಲಿಲ್ಲ. ಅವರು ಅಜ್ಞಾತವಾಸಕ್ಕೆ ಹೋಗಿರಬಹುದು ಎಂದುಕೊಂಡೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Nov 04, 2024 10:40 PM
Loading...
Unable to load recommendations.
Follow Us
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More