Daily Devotional: ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ

| Updated By: Ganapathi Sharma

Updated on: Dec 26, 2024 | 7:06 AM

ಮನೆಯಲ್ಲಿ ಸುಖ, ಶಾಂತಿ ಮತ್ತು ಸಮೃದ್ಧಿ ಹೆಚ್ಚಿಸಲು ಮಾಡಬೇಕಾದ ಸರಳ ವಿಧಾನಗಳ ಬಗ್ಗೆ ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ. ವಾರಕ್ಕೊಮ್ಮೆ ಬೂಟು/ಚಪ್ಪಲಿಗಳನ್ನು ಉಪ್ಪುನೀರಿನಲ್ಲಿ ತೊಳೆಯುವುದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪಕ್ಕೆ ನಮಸ್ಕಾರ ಮಾಡುವುದು, ಧೂಪ ಹಚ್ಚುವುದು ಮತ್ತು ಮನೆಯ ಮುಖ್ಯ ಬಾಗಿಲಿಗೆ ಆರತಿ ಮಾಡುವುದು ಮುಂತಾದ ಕ್ರಮಗಳನ್ನು ಅವರು ಸೂಚಿಸಿದ್ದಾರೆ.

ನಮಗೆ ಸಾಮಾನ್ಯವಾಗಿ ಭಗವಂತ ಎಲ್ಲವೂ ಕೊಟ್ಟಿದ್ದರೂ ಕೂಡ ಮಧ್ಯಮ ವರ್ಗದವರು ಅಥವಾ ಬಡತನದಲ್ಲಿ ಇರತಕ್ಕಂಥವರು ಅಥವಾ ಕೆಲವೊಮ್ಮೆ ತುಂಬಾ ಶ್ರೀಮಂತರಾಗಿದ್ದರೂ ಸಹ ಅವರಲ್ಲೂ ಮಾನಸಿಕ ಯಾತನೆ ಇದ್ದೇ ಇರುತ್ತದೆ. ಶ್ರೀಮಂತರಿಗೆ ಟೆನ್ಶನ್ ಒಂದು ಕಡೆಯಾದರೆ, ಮಧ್ಯಮ ವರ್ಗದವರಿಗೆ ಪದೇ ಪದೇ ಅನಾರೋಗ್ಯ ಕಾಡುವುದು, ಅಥವಾ ಬಡವರಾದರೆ ಸರಿಯಾದ ಆದಾಯ ಇಲ್ಲದೆ ಮನೆಯಲ್ಲಿ ತೊಂದರೆಗಳನ್ನು ಅನುಭವಿಸುತ್ತಿರುವುದು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಮೂರು ವರ್ಗದವರು ಐಶ್ವರ್ಯ ಬರಲು, ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರಲು ಕೆಲವು ಕ್ರಮಗಳನ್ನು ಅನುಸರಿಸಬಹುದು. ಬಡತನ ನಿರ್ಮೂಲನೆ ಮಾಡಿಕೊಳ್ಳಬೇಕು ಅಥವಾ ಮನಸ್ಸು ಶಾಂತಿಯಿಂದ ಇರಬೇಕು, ಸುಖಮಯವಾಗಿರಬೇಕು ಇವೆಲ್ಲವೂ ಬೇಕು ಅಂದ್ರೆ ನಾವು ಏನು ಮಾಡಬೇಕು ಎಂಬುದನ್ನು ಮತ್ತು ಅದಕ್ಕಿರುವ ಸರಳವಾದ ಕೆಲವು ವಿಧಾನಗಳನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ವಿವರಿಸಿದ್ದಾರೆ.