Video: ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​

ಸಾಕು ನಾಯಿಯೊಂದು ಬೀದಿ ನಾಯಿಗಳಿಂದ ಮಕ್ಕಳನ್ನು ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆ ರಿಷಿಕೇಶದಲ್ಲಿ ನಡೆದಿದೆ. ಆ ಬೀದಿ ನಾಯಿಗಳಿಂದ ಮಕ್ಕಳನ್ನು ರಕ್ಷಿಸಲು ಜರ್ಮನ್ ಶೆಫರ್ಡ್​ ನಾಯಿ ಹೀರೋನಂತೆ ಹಾರಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 4-5 ಮಕ್ಕಳ ಹಿಂದೆ ಹೊರಟ ಬೀದಿ ನಾಯಿಗಳನ್ನು ಗಮನಿಸಿದ ಈ ನಾಯಿ ಕೂಡಲೇ ಹಾರಿ ಆ ನಾಯಿಗಳನ್ನು ಅಟ್ಟಿಸಿಕೊಂಡು ಹೋಗುತ್ತದೆ.

ರಿಷಿಕೇಶ, ಆಗಸ್ಟ್​ 13: ಸಾಕು ನಾಯಿಯೊಂದು ಬೀದಿ ನಾಯಿಗಳಿಂದ ಮಕ್ಕಳನ್ನು ರಕ್ಷಣೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆ ರಿಷಿಕೇಶದಲ್ಲಿ ನಡೆದಿದೆ. ಆ ಬೀದಿ ನಾಯಿಗಳಿಂದ ಮಕ್ಕಳನ್ನು ರಕ್ಷಿಸಲು ಜರ್ಮನ್ ಶೆಫರ್ಡ್​ ನಾಯಿ ಹೀರೋನಂತೆ ಹಾರಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

4-5 ಮಕ್ಕಳ ಹಿಂದೆ ಹೊರಟ ಬೀದಿ ನಾಯಿಗಳನ್ನು ಗಮನಿಸಿದ ಈ ನಾಯಿ ಕೂಡಲೇ ಹಾರಿ ಆ ನಾಯಿಗಳನ್ನು ಅಟ್ಟಿಸಿಕೊಂಡು ಹೋಗುತ್ತದೆ. ಆಗ ಮಕ್ಕಳು ನಿರಾಳರಾಗುತ್ತಾರೆ.ಭಾರತದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಹೇಗೆ ನಿರ್ವಹಿಸುವುದು ಎಂಬುದರ ಕುರಿತು ದೀರ್ಘಕಾಲದ ಚರ್ಚೆಯನ್ನು ಸುಪ್ರೀಂ ಕೋರ್ಟ್‌ನ ಆದೇಶಗಳು ಮತ್ತೆ ಹುಟ್ಟುಹಾಕಿವೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ