ಉತ್ತರ ಕನ್ನಡ: ಗುಡ್ಡ ಕುಸಿತದಲ್ಲಿ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯ ಗೋಳಾಟ
ಅಂಕೋಲಾ ತಾಲೂಕಿನ ಉಳುವರೆ ಗ್ರಾಮದ ಬಳಿ ಗುಡ್ಡ ಕುಸಿತದಿಂದ ಸುಮಾರು 39 ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗಿದೆ. ಇತ್ತ ತಮ್ಮನ ಹೆಂಡತಿ ಕಳೆದುಕೊಂಡ ಮಹಿಳೆಯೊಬ್ಬರು ಮಾತನಾಡಿ, ‘ಮುಂದಿನ ವರ್ಷ ತಮ್ಮ ಮಗಳ ಮಾಡಲು 5ಲಕ್ಷ ರೂ. ಚಿನ್ನ ಮಾಡಿಸಿದ್ದೇವೋ, ಈಗ ಎಲ್ಲವೂ ಹೋಯ್ತು ಎಂದು ಗೋಳಾಡಿದ್ದಾರೆ.
ಉತ್ತರ ಕನ್ನಡ, ಜು.21: ಮಳೆಯಿಂದಾಗಿ ಉತ್ತರ ಕನ್ನಡ(Uttara Kannada) ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಅದರಂತೆ ಅಂಕೋಲಾ ತಾಲೂಕಿನ ಉಳುವರೆ ಗ್ರಾಮದ ಬಳಿ ಗುಡ್ಡ ಕುಸಿತದಿಂದ ಸುಮಾರು 39 ಕ್ಕೂ ಹೆಚ್ಚು ಕುಟುಂಬಗಳು ಬೀದಿ ಪಾಲಾಗಿದೆ. ಇತ್ತ ಸಂಬಂಧಿಕರನ್ನ ಕಳೆದುಕೊಂಡು ಮಹಿಳೆಯೊಬ್ಬರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕಿದ್ದಾರೆ. ಇನ್ನು ಉಳುವರೆ ಗ್ರಾಮಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನೀಡಿದ್ದು, ‘ಈ ವೇಳೆ ಉಳುವರೆ ಗ್ರಾಮದಲ್ಲಿ ತಮ್ಮನ ಹೆಂಡತಿ ಕಳೆದುಕೊಂಡ ಮಹಿಳೆಯೊಬ್ಬರು ವಿಜಯೇಂದ್ರ ಬಳಿ ಗೋಳಾಡಿದ್ದಾರೆ. ನಮ್ಮವರ ಮೃತದೇಹವನ್ನಾದರೂ ಹುಡುಕಿಕೊಡಿ, ನಿಮ್ಮ ಹಣ ನಮಗೆ ಬೇಡ ಎಂದಿದ್ದಾರೆ. ಜೊತೆಗೆ ನಮ್ಮನ್ನು ಇಲ್ಲಿಂದ ಸ್ಥಳಾಂತರಿಸಿ, ಬೇರೆಡೆ ಒಂದು ಸುರನ್ನು ಕಟ್ಟಿಕೊಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ