ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!

ಚಾಮರಾಜನಗರ: ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ!

ಸೂರಜ್ ಪ್ರಸಾದ್ ಎಸ್.ಎನ್
| Updated By: ಕಿರಣ್ ಹನುಮಂತ್​ ಮಾದಾರ್

Updated on: Jul 21, 2024 | 8:50 PM

ಕಾವೇರಿ ಕೊಳ್ಳದ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನಲೆ ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದೆ. ಭರಚುಕ್ಕಿ ಜಲಪಾತಕ್ಕೆ ರಾಜ್ಯದ ನಾನ ಭಾಗಗಳಿಂದ ಪ್ರವಾಸಿಗರ ದಂಡೇ ಆಗಮಿಸ್ಥಯಿದ್ರೆ, ಇತ್ತ ಕೆಲ ಪ್ರವಾಸಿಗರು ಅರಣ್ಯ ಸಿಬ್ಬಂದಿಯ ಕಣ್ತಪ್ಪಿಸಿ ಡೆಡ್ಲಿ ಸ್ಪಾಟ್ ತಲುಪಿ ಸೆಲ್ಪಿ ತೆಗೆದುಕೊಳ್ಳುವಲ್ಲಿ ಮಗ್ನರಾಗಿದ್ದರು.

ಚಾಮರಾಜನಗರ, ಜು.21: ಕಾವೇರಿ ಕೊಳ್ಳದ ಪ್ರದೇಶದಲ್ಲಿ ಭಾರೀ ಮಳೆ ಆಗ್ತಾಯಿದೆ ಈ ಹಿನ್ನಲೆ ಕೃಷ್ಣರಾಜಸಾಗರಕ್ಕೆ ಭಾರೀ ಪ್ರಮಾಣದ ಇನ್ ಫ್ಲೊ ಇರುವ ಕಾರಣ ಚಾಮರಾಜನಗರ(Chamarajanagra) ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಭರಚುಕ್ಕಿ ಜಲಪಾತ ಬೋರ್ಗರೆಯುತ್ತಿದ್ದು, ಪ್ರವಾಸಿಗರು ರುದ್ರ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ರಾಜ್ಯದ ನಾನ ಭಾಗಗಳಿಂದ ಆಗಮಿಸುತ್ತಿದ್ದಾರೆ. ಕಾಂಕ್ರೀಟ್ ಕಾಡಿಂದ ಬೆಸತ್ತು ಸಿಗ್ನಲ್ ಕಿರಿಕಿರಿಯಿಂದ ರೋಸಿ ಹೋದ ಬೆಂಗಳೂರಿಗರೇ ಹೆಚ್ಚೆಚ್ಚಾಗಿ ಭರಚುಕ್ಕಿ ಫಾಲ್ಸ್ ಗೆ  ಬರುತ್ತಿದ್ದಾರೆ. ಹಚ್ಚ ಹಸಿರಿನ ಕಾನನ ಬಂಡೆಗಳ ಮದ್ಯೆ ಬೋರ್ಗೆಯುತ್ತ ಅತಿ ರಭಸವಾಗಿ ಹರಿಯುತ್ತಿರೊ ಕಾವೇರಿ ಮಾತೆಯನ್ನ ಕಂಡು ಪ್ರವಾಸಿಗರ ದಂಡು ಕುಟುಂಬಸ್ಥರ ಜೊತೆ ಫೋಟೊ ಶೂಟ್ ಮಾಡುವಲ್ಲಿ ಬ್ಯುಸಿಯಾಗಿದ್ದರು.  ಇನ್ನು ಕೆಲವರು ಮಳೆಯಲ್ಲೇ ನನೆಯುತ್ತ ಜಲಪಾತವನ್ನ ನೋಡುತ್ತ ರಿಲ್ಯಾಕ್ಸ್ ಆದರು. ಇವೆಲ್ಲದರ ಮಧ್ಯೆ ಸೆಲ್ಫಿ ಶೋಕಿಗೆ ಡೆಡ್ಲಿ ಸ್ಪಾಟ್ ತಲುಪಿ ಪ್ರವಾಸಿಗರ ಹುಚ್ಚಾಟ ಮೆರೆದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ