ಶಿರೂರು ಗುಡ್ಡ ಕುಸಿತ ಸ್ಥಳಕ್ಕೆ ಮಿಲಿಟರಿ ಪಡೆ: ಮಣ್ಣು ತೆರವು ಕಾರ್ಯಾಚರಣೆ ಶುರು
ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಶಿರೂರು ಗುಡ್ಡ ಕುಸಿತ ಸಂಭವಿಸಿ ಇವತ್ತಿಗೆ 6ನೇ ದಿನ. ಮಣ್ಣು ತೆರವು ಕಾರ್ಯ ನಿರಂತರವಾಗಿ ಮಾಡುತ್ತಿದ್ದರೂ ಮುಗಿಯುವಂತೆಯೇ ಕಾಣುತ್ತಿಲ್ಲ. ಈ ಮಧ್ಯೆ ಕಾರ್ಯಾಚರಣೆ ನೆರವಾಗುವ ನಿಟ್ಟಿನಲ್ಲಿ ಬೆಳಗಾವಿಯಿಂದ ಶಿರೂರು ಗ್ರಾಮಕ್ಕೆ ಮಿಲಿಟರಿ ಪಡೆ ಆಗಮಿಸಿದೆ. ಮಣ್ಣು ತೆರವು ಕಾರ್ಯಾಚರಣೆಯನ್ನು ಆರಂಭಿಸಲಿದೆ.
ಉತ್ತರ ಕನ್ನಡ, ಜುಲೈ 21: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು (Shiroor) ಗುಡ್ಡ ಕುಸಿದು ಇಂದಿಗೆ ಆರು ದಿನ ಕಳೆದಿದೆ. ಕಾರ್ಯಾಚರಣೆ ಇನ್ನೂ ಪೂರ್ಣವಾಗಿಲ್ಲ. ಮಣಿನಡಿಯಲ್ಲಿ ಸಿಕ್ಕೂ ಜೀವ ಕಳೆದುಕೊಂಡವರ ಹುಡುಕಾಟ ಕಾರ್ಯ ನಿರಂತರ ಮುಂದುವರೆದಿದೆ. ಈ ಮಧ್ಯೆ ಇಂದು ಗುಡ್ಡ ಕುಸಿದ ಶಿರೂರು ಗ್ರಾಮಕ್ಕೆ ಪ್ರದೇಶಕ್ಕೆ ಬೆಳಗಾವಿಯಿಂದ ಮಿಲಿಟರಿ ಪಡೆ (military force) ಆಗಮಿಸಿದೆ. ಆ ಮೂಲಕ ಮಣ್ಣು ತೆರವು ಕಾರ್ಯಾಚರಣೆಯನ್ನು ಮಿಲಿಟರಿ ಪಡೆ ಆರಂಭಿಸಲಿದೆ. ಗುಡ್ಡದ ಮಣ್ಣಿನಡಿ ಕೇರಳ ಮೂಲದ ಲಾರಿ ಚಾಲಕ ಸಿಲುಕಿಕೊಂಡಿದ್ದು, ಆತನ ಮೊಬೈಲ್ ಲೊಕೇಶನ್ ಪತ್ತೆ ಆಗಿತ್ತು. ಇಂದು ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos