ಕಾಶ್ಮೀರದಂತೆ ಭಾಸವಾದ ಹಿಮವದ್ ಗೋಪಾಲಸ್ವಾಮಿ ಬೆಟ್ಟ: ಕಣ್ಮನ ಸೆಳೆಯುವ ವಿಡಿಯೋ ಇಲ್ಲಿದೆ ನೋಡಿ
ಹಿಮವದ್ ಗೋಪಾಲಸ್ವಾಮಿ ಬೆಟ್ಟ ದಟ್ಟವಾದ ಮಂಜಿನಿಂದ ಆವೃತವಾಗಿದ್ದು, ಪ್ರವಾಸಿಗರನ್ನು ಸೆಳೆಯುತ್ತಿದೆ. ವರ್ಷವಿಡೀ ಮಂಜಿನಿಂದ ಕೂಡಿರುವ ಬೆಟ್ಟ ಈ ವರ್ಷ ಹ್ಎಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರ ಸೆಳೆಯುತ್ತಿದೆ. ಪ್ರವಾಸಿಗರ ಮೊಬೈಲ್ನಲ್ಲಿ ಸೆರೆಯಾಗಿರುವ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದು, ಹಿಮವದ್ ಗೋಪಾಲಸ್ವಾಮಿ ಬೆಟ್ಟವನ್ನು ಕರ್ನಾಟಕದ ಕಾಶ್ಮೀರ ಎಂದೇ ಪ್ರವಾಸಿಗರು ಕೊಂಡಾಡುತ್ತಿದ್ದಾರೆ. ವಿಡಿಯೋ ಇಲ್ಲಿದೆ.
ಚಾಮರಾಜನಗರ, ಅಕ್ಟೋಬರ್ 25: ಸೈಕ್ಲೋನ್ ಪರಿಣಾಮ ಮತ್ತು ಜಿಟಿಜಿಟಿ ಮಳೆಯಿಂದಾಗಿ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಿಮವದ್ ಗೋಪಾಲಸ್ವಾಮಿ ಬೆಟ್ಟ ದಟ್ಟವಾದ ಮಂಜಿನಿಂದ ಆವೃತವಾಗಿ ಕಾಶ್ಮೀರದಂತೆ ಗೋಚರಿಸುತ್ತಿದೆ. ದಕ್ಷಿಣ ಗೋವರ್ಧನಗಿರಿ ಎಂದೇ ಖ್ಯಾತಿ ಪಡೆದಿರುವ, ವರ್ಷವಿಡೀ ಹಿಮದಿಂದ ಕೂಡಿರುತ್ತದೆ. ಸದ್ಯ ಚಿತ್ತಾಕರ್ಷಕ ನೋಟದೊಂದಿಗೆ ಪ್ರವಾಸಿಗರನ್ನು ಸೆಳೆಯುತ್ತಿದೆ. ಮಂಜಿನ ಮುಸುಕಲ್ಲೇ ಗೋಪಾಲಸ್ವಾಮಿಯ ದರ್ಶನ ಪಡೆದ ಭಕ್ತಗಣ, ಮೊಬೈಲ್ ಕ್ಯಾಮರದಲ್ಲಿ ಸೆರೆ ಹಿಡಿದಿರುವ ವಿಡಿಯೋ ಇಲ್ಲಿದೆ.
Published on: Oct 25, 2025 07:38 AM