AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರ ಸ್ನೇಹ ಸಮ್ಮಿಲನ, ಸಂತೋಷ್ ಗುರೂಜಿ ನೇತೃತ್ವ

ಬೆಂಗಳೂರಲ್ಲಿ ಹಿಂದೂ-ಮುಸ್ಲಿಂ ಧಾರ್ಮಿಕ ಮುಖಂಡರ ಸ್ನೇಹ ಸಮ್ಮಿಲನ, ಸಂತೋಷ್ ಗುರೂಜಿ ನೇತೃತ್ವ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Apr 11, 2022 | 10:38 PM

Share

ಈಗ ನಡೆಯುತ್ತಿರುವ ಸಂಗತಿಗಳು ನಮ್ಮ ದೇಶಕ್ಕೆ ಶೋಭೆ ತರೋದಿಲ್ಲ. ಸಂವಿಧಾನವನ್ನು ಬಹಿಷ್ಕರಿಸಿ ನಾವ ಭಾರತೀಯರಾಗುವುದು ಸಾಧ್ಯವಿಲ್ಲ. ಒಡೆದುದನ್ನು ಒಂದುಗೂಡಿಸೋದು ಧರ್ಮ ಆದರೆ ಒಂದಾಗಿರುದನ್ನು ಒಡೆಯುವುದು ರಾಜಕಾರಣ ಎಂದು ಗುರೂಜಿ ಹೇಳಿದರು.

ಭಾರತ ರಕ್ಷಣಾ ವೇದಿಕೆ ಮತ್ತು ಇಸ್ಲಾಂ ಎಜುಕೇಶನ್ ಟ್ರಸ್ಟ್ ಆಶ್ರಯದಲ್ಲಿ ಹಾಗೂ ಸಂತೋಷ್ ಗುರೂಜಿ (Santosh Guruji) ಅವರ ನೇತೃತ್ವದಲ್ಲಿ ಬೆಂಗಳೂರಲ್ಲಿ ಒಂದು ಮಹತ್ವಪೂರ್ಣ ಹಾಗೂ ಅರ್ಥಪೂರ್ಣ ಸಭೆ ನಡೆಯಿತು. ಹಿಂದೂ (Hindu) ಮತ್ತು ಮುಸ್ಲಿಂ (Muslim) ಮುಖಂಡರೊಂದಿಗೆ, ವಿಚಾರವಾದಿಗಳು ಹಾಗೂ ಪ್ರಗತಿಪರ ಚಿಂತಕರು ಗುರೂಜಿಗಳ ಆಶಯದಂತೆ ಆಯೋಜಿಸಲಾಗಿದ್ದ ಸ್ನೇಹ-ಸಮ್ಮಿಲನದಲ್ಲಿ ಎರಡೂ ಧರ್ಮಗಳ ಮುಖಂಡರು ಧರ್ಮ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಕೆಲಸದಲ್ಲಿ ಯಾವ ಕೋಮಿನವರೂ ಭಾಗಿಯಾಗಬಾರದು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತಾಡಿದ ಹಿಂದೂ ಮುಖಂಡ ಭರತ ಶೆಟ್ಟಿ ಅವರು ಪದೇಪದೆ ಎರಡು ಧರ್ಮಗಳ ನಡುವೆ ಕಿಡಿ ಹೊತ್ತಿಸಲು ಪ್ರಯತ್ನಿಸುತ್ತಿರುವ ಶಕ್ತಿಗಳ ಬಗ್ಗೆ ಎಚ್ಚರದಿಂದರಬೇಕು. ತಪ್ಪು ಯಾವುದೇ ಸಮುದಾಯದವರಿಂದ ಅಗಿರಲಿ, ಅದನ್ನು ಆ ಧರ್ಮದವರೇ ಸರಿಪಡಿಸಿಕೊಳ್ಳಬೇಕೇ ಹೊರತು ಅದನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಬಾರದು ಎಂದರು.

ನಂತರ ಮಾತಾಡಿದ ಮುಸ್ಲಿಂ ಧಾರ್ಮಿಕ ಮುಖಂಡ ಉಮರ್ ಶರೀಫ್ ಅವರು ಸಂತೋಷ್ ಗುರೂಜಿಗಳ ಮಾರ್ಗದರ್ಶನದಲ್ಲಿ ಭರತ ಶೆಟ್ಟಿ ಹಿಂದೂ-ಮುಸ್ಲಿಂ ಸಮುದಾಯಗಳ ಸೌಹಾರ್ದತೆ ಏರ್ಪಡಲು ಮಾಡುತ್ತಿರುವ ಪ್ರಯತ್ನಗಳನ್ನು ಶ್ಲಾಘಿಸಿದರು. ಭರತ ಅವರಲ್ಲಿ ಉತ್ತಮ ನಾಯಕತ್ವ ಗುಣಗಳಿವೆ ಎಂದು ಹೇಳಿದರು.

ಪ್ರಸಕ್ತ ವಿದ್ಯಮಾನಗಳನ್ನು ಗಮನಿಸುತ್ತಿದ್ದರೆ ಮೊದಲು ಧರ್ಮ ಸಂರಕ್ಷಣೆಯ ಕೆಲಸ ಆಗಬೇಕಿದೆ ಎಂದು ಸಂತೋಷ ಗುರೂಜಿ ಅವರು ಹೇಳಿದರು. ಅದ್ವೈತ ಸಿದ್ಧಾಂತವನ್ನು ಒಪ್ಪಿಕೊಂಡಿರುವ ದೇಶ ನಮ್ಮದು, ಎಲ್ಲವನ್ನು ಒಂದು ಮಾಡುವ ತತ್ವ, ಅಹಂಕಾರ ಮತ್ತು ರಾಜಕೀಯವನ್ನು ದೂರವಿಟ್ಟು ನಡೆಯುವ ತತ್ವವನ್ನು ಒಪ್ಪಿಕೊಂಡ ಜನ ನಾವು. ನಮ್ಮಿಂದ ತಪ್ಪಾದಾಗ ಆತ್ಮಾವಲೋಕನ ಮಾಡಿಕೊಳ್ಳಬೇಕು, ಅದು ಸಾಮರಸ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಗುರೂಜಿ ಹೇಳಿದರು.

ಈಗ ನಡೆಯುತ್ತಿರುವ ಸಂಗತಿಗಳು ನಮ್ಮ ದೇಶಕ್ಕೆ ಶೋಭೆ ತರೋದಿಲ್ಲ. ಸಂವಿಧಾನವನ್ನು ಬಹಿಷ್ಕರಿಸಿ ನಾವ ಭಾರತೀಯರಾಗುವುದು ಸಾಧ್ಯವಿಲ್ಲ. ಒಡೆದುದನ್ನು ಒಂದುಗೂಡಿಸೋದು ಧರ್ಮ ಆದರೆ ಒಂದಾಗಿರುದನ್ನು ಒಡೆಯುವುದು ರಾಜಕಾರಣ. ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣಿಗಳು ಸಮಾಜ ಒಡೆಯುವ ಪ್ರಯತ್ನ ಮಾಡುತ್ತಾರೆ, ಅವರ ಕೆಟ್ಟ ಯೋಚನೆಗಳಿಗೆ ಬಲಿಯಾಗಬಾದು ಎಂದು ಸ್ವಾಮೀಜಿ ಎಚ್ಚರಿಸಿದರು.

ಇದನ್ನೂ ಓದಿ:  ಕರ್ನಾಟಕದಲ್ಲಿನ ಧರ್ಮ ಸಂಘರ್ಷದಿಂದ ಉದ್ದಿಮೆಗಳಿಗೆ ಹಿನ್ನಡೆ ಆಗುತ್ತೆ ಎಂಬುದು ಸುಳ್ಳು: ಬಸವರಾಜ ಬೊಮ್ಮಾಯಿ