Daily Devotional: ತೆಂಗಿನಕಾಯಿ ಕೊಳೆತು ಹೋದರೆ ಏನು ಅರ್ಥ

|

Updated on: Mar 06, 2024 | 6:54 AM

ಕೆಲವೊಮ್ಮೆ ನಾವು ಪೂಜೆಗೆ ತೆಗೆದುಕೊಂಡು ಹೋದ ತೆಂಗಿನಕಾಯಿ ಇದ್ದಕ್ಕಿದ್ದಂತೆ ಹಾಳಾಗಿರುತ್ತದೆ. ನಾವು ದೇವರ ಪೂಜೆಯನ್ನು ಮಾಡುವಾಗ ತೆಂಗಿನಕಾಯಿ ಕೊಳೆತಿದ್ದರೆ, ಅದರ ಹಿಂದಿನ ಕಾರಣವೇನಂಬುದನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಹಿಂದೂ ಧರ್ಮೀಯರು ಪ್ರತಿಯೊಂದು ಕಾರ್ಯದಲ್ಲೂ ತೆಂಗಿನಕಾಯಿಯನ್ನು ಒಡೆಯುವ ಸಂಪ್ರದಾಯವನ್ನು ಹೊಂದಿರುತ್ತಾರೆ. ಅಷ್ಟು ಮಾತ್ರವಲ್ಲ, ತೆಂಗಿನಕಾಯಿ ಇಲ್ಲದೇ ನಮ್ಮ ಪೂಜೆ ಅಥವಾ ಆಚರಣೆಗಳು ಅಪೂರ್ಣವೆಂದು ಹೇಳಲಾಗುತ್ತದೆ. ಈ ಕಾರಣದಿಂದ ನಾವು ಮಾಡುವ ಪೂಜೆಯಲ್ಲಿ ತೆಂಗಿನಕಾಯಿಯನ್ನು ಬಳಸುವುದು ಕಡ್ಡಾಯವಾಗಿರುತ್ತದೆ. ಆದರೆ, ಕೆಲವೊಮ್ಮೆ ನಾವು ಪೂಜೆಗೆ ತೆಗೆದುಕೊಂಡು ಹೋದ ತೆಂಗಿನಕಾಯಿ ಇದ್ದಕ್ಕಿದ್ದಂತೆ ಹಾಳಾಗಿರುತ್ತದೆ. ನಾವು ದೇವರ ಪೂಜೆಯನ್ನು ಮಾಡುವಾಗ ತೆಂಗಿನಕಾಯಿ ಕೊಳೆತಿದ್ದರೆ, ಅದರ ಹಿಂದಿನ ಕಾರಣವೇನಂಬುದನ್ನು ನಾವಿಲ್ಲಿ ತಿಳಿದುಕೊಳ್ಳೋಣ. ಕೆಲವೊಮ್ಮೆ ತೆಂಗಿನಕಾಯಿ ಕೊಳೆತು ಹೋಗುವುದು ಸಾಮಾನ್ಯ. ಕೆಲವರು ಇದನ್ನು ಕೆಟ್ಟ ಶಕುನ ಎಂದು ಪರಿಗಣಿಸುತ್ತಾರೆ. ಆದರೆ ಅದರ ಹಿಂದಿನ ಅರ್ಥ ಬೇರೆಯೇ ಇದೆ. ಏನು ಅರ್ಥ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ..