ಲೂಸ್​ ಮಾದ ಯೋಗಿ ನಟನೆಯ 50ನೇ ಸಿನಿಮಾದಲ್ಲಿ ಒರಟ ಪ್ರಶಾಂತ್​, ಶ್ರೀನಗರ ಕಿಟ್ಟಿ

ಲೂಸ್​ ಮಾದ ಯೋಗಿ ನಟನೆಯ 50ನೇ ಸಿನಿಮಾದಲ್ಲಿ ಒರಟ ಪ್ರಶಾಂತ್​, ಶ್ರೀನಗರ ಕಿಟ್ಟಿ

ಮದನ್​ ಕುಮಾರ್​
|

Updated on: Mar 05, 2024 | 7:17 PM

‘ರೋಜಿ’ ಸಿನಿಮಾ ಮೂಲಕ ‘ಒರಟ’ ಪ್ರಶಾಂತ್​ ಅವರು ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಲೂಸ್​ ಮಾದ ಯೋಗಿ ಮತ್ತು ಪ್ರಶಾಂತ್​ ಅವರು ಒಟ್ಟಿಗೆ ನಟಿಸಬೇಕು ಎಂದು ಬಹಳ ವರ್ಷಗಳಿಂದ ಆಸೆ ಇಟ್ಟುಕೊಂಡಿದ್ದರು. ‘ರೋಜಿ’ ಸಿನಿಮಾ ಮೂಲಕ ಅದು ಈಡೇರುತ್ತಿದೆ. ಚಿತ್ರದ ವಿಶೇಷತೆಗಳ ಬಗ್ಗೆ ‘ಒರಟ’ ಪ್ರಶಾಂತ್​ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೆಲವು ವಿಷಯ ಹಂಚಿಕೊಂಡಿದ್ದಾರೆ.

ನಟ ‘ಒರಟ’ ಪ್ರಶಾಂತ್​ ಅವರು ‘ರೋಜಿ’ (Rosy Movie) ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಇದು ಲೂಸ್​ ಮಾದ ಯೋಗಿ (Loose Mada Yogi) ನಟನೆಯ 50ನೇ ಸಿನಿಮಾ ಎಂಬುದು ವಿಶೇಷ. ಇದೇ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡ ಅಭಿನಯಿಸಿದ್ದಾರೆ. ಇತ್ತೀಚೆಗೆ ಚಿತ್ರತಂಡದಿಂದ ‘ಒರಟ’ ಪ್ರಶಾಂತ್​ (Orata Prashanth) ಅವರ ಪೋಸ್ಟರ್​ ಬಿಡುಗಡೆ ಮಾಡಲಾಯಿತು. ಚಿತ್ರದ ಸುದ್ದಿಗೋಷ್ಠಿಯಲ್ಲಿ ಪ್ರಶಾಂತ್​ ಮಾತನಾಡಿದ್ದಾರೆ. ‘ಯಾವುದಕ್ಕೂ ಕೊರತೆ ಇಲ್ಲದಂತೆ ಅದ್ದೂರಿಯಾಗಿ ಈ ಸಿನಿಮಾ ಮೂಡಿಬರುತ್ತಿದೆ. ನಿರ್ದೇಶಕರ ಹೆಸರು ಮಾತ್ರ ಶೂನ್ಯ. ಆದರೆ ಅವರ ತಲೆಯಲ್ಲಿ ಬಹಳಷ್ಟು ವಿಷಯ ಇದೆ. ಅವರೊಳಗೆ ತುಡಿತ ಇದೆ. ಅದು ನನಗೆ ಖುಷಿ ನೀಡುತ್ತದೆ. ಇಂದು ನೀವು ನೋಡುತ್ತಿರುವ ಪೋಸ್ಟರ್​ನ ಕ್ರೆಡಿಟ್​ ನಿರ್ದೇಶಕರಿಗೆ ಸಲ್ಲಬೇಕು. ನನ್ನ ಪಾತ್ರ ಡಿಫರೆಂಟ್​ ಆಗಿದೆ. ನಾನು ಮತ್ತು ಯೋಗಿ ಅವರು ಒಂದೇ ಏರಿಯಾದಲ್ಲಿ ಬೆಳೆದವರು. ಒಟ್ಟಿಗೆ ಸಿನಿಮಾ ಮಾಡಬೇಕು ಎಂಬುದು ನಮ್ಮ ಬಹುದಿನಗಳ ಕನಸಾಗಿತ್ತು. ನಿರ್ಮಾಪಕರಿಂದ ಅದು ಇಂದು ನನಗಸಾಗಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.