ಹಿಂದಿ ಹೇರಿಕೆಯಂತೆ, ಹಿಂದುತ್ವ ಹೇರಿಕೆಯನ್ನು ನಾವು ಒಪ್ಪಲ್ಲ ಎಂದ ಚೇತನ್ ಅಹಿಂಸಾ

ಹಿಂದಿ ಹೇರಿಕೆಯಂತೆ, ಹಿಂದುತ್ವ ಹೇರಿಕೆಯನ್ನು ನಾವು ಒಪ್ಪಲ್ಲ ಎಂದ ಚೇತನ್ ಅಹಿಂಸಾ

TV9 Web
| Updated By: ರಾಜೇಶ್ ದುಗ್ಗುಮನೆ

Updated on: Oct 19, 2022 | 3:04 PM

ನಟ ಚೇತನ್ ಅಹಿಂಸಾ ಅವರು ‘ಕಾಂತಾರ’ ಚಿತ್ರದಲ್ಲಿ ತೋರಿಸಿದ ಕೆಲ ವಿಚಾರಗಳ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಇದಕ್ಕೆ ಸಂಬಂಧಿಸಿ ಅವರು ಹಾಕಿದ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು.

ನಟ ಚೇತನ್ ಅಹಿಂಸಾ(Chetan Kumar) ಅವರು ‘ಕಾಂತಾರ’ ಚಿತ್ರದಲ್ಲಿ ತೋರಿಸಿದ ಕೆಲ ವಿಚಾರಗಳ ಬಗ್ಗೆ ಅಪಸ್ವರ ತೆಗೆದಿದ್ದಾರೆ. ಇದಕ್ಕೆ ಸಂಬಂಧಿಸಿ ಅವರು ಹಾಕಿದ ಪೋಸ್ಟ್ ಸಾಕಷ್ಟು ವೈರಲ್ ಆಗಿತ್ತು. ಈ ಬಗ್ಗೆ ಪರ-ವಿರೋಧ ಚರ್ಚೆ ಶುರುವಾಯಿತು. ಕೆಲವರು ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂಬ ಅಭಿಪ್ರಾಯ ಚೇತನ್ ಕಡೆಯಿಂದ ಬಂತು. ಹೀಗಾಗಿ, ಅವರು ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ‘ಹಿಂದಿ ಹೇರಿಕೆಯಂತೆ, ಹಿಂದುತ್ವ ಹೇರಿಕೆಯನ್ನು ನಾವು ಒಪ್ಪಲ್ಲ’ ಎಂದು ಚೇತನ್ ಅಹಿಂಸಾ ಹೇಳಿದ್ದಾರೆ.