Temple Tour: ಸಾಕ್ಷಾತ್ ಪರಶಿವನೇ ಭೂಮಿಗೆ ಕಾಲಿಟ್ಟ ಪೌರಾಣಿಕ ಕ್ಷೇತ್ರ

| Updated By: shruti hegde

Updated on: Nov 16, 2021 | 8:55 AM

ಈ ನಯನ ಮನೋಹರವಾದ ನಿಸರ್ಗದ ಮಧ್ಯೆ ಕುಳಿತಿದ್ದಾನೆ ಕಾಲಭೈರವೇಶ್ವರ ಸ್ವಾಮಿ. ದೇವರ ಮನೆಯಲ್ಲಿ ನೆಲೆ ನಿಂತ ಕಾಲಭೈರವೇಶ್ವರ ಕ್ಷೇತ್ರದಲ್ಲಿ ಸಾಕ್ಷಾತ್ ಪರಶಿವನೇ ಕಾಲಿಟ್ಟ ಐತಿಹ್ಯವಿದೆ.

ಇಲ್ಲಿ ಮೋಡಗಳು ಕಣ್ಣಾಮುಚ್ಚಾಲೆ ಆಡತ್ತೆ. ಸುಯ್ ಅಂತಾ ಬೀಸುವ ತಂಗಾಳಿ ಮನಸಿಗೆ ಹಿತವನ್ನ ನೀಡುತ್ತೆ. ದೂರದಲ್ಲಿ ಕಾಣುವ ಝರಿಗಳ ನೋಟ ನಯನ ಮನೋಹರ. ಮೋಡಗಳ ಮಧ್ಯೆ ಸಾಗುವ ಮಂಜಿನಾಟವಂತೂ ಕಣ್ಣಿಗೆ ಹಬ್ಬ. ದೇವರೇ ಸೃಷ್ಟಿ ಮಾಡಿದಂತಿರುವ ಈ ಸುಂದರ ಲೋಕದ ಹೆಸರೇ ದೇವರಮನೆ. ನಿಜಕ್ಕೂ ಭೂ ಲೋಕದ ಸ್ವರ್ಗದಂತಿರುವ ಈ ಸ್ಥಳ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವರಮನೆ. ಈ ನಯನ ಮನೋಹರವಾದ ನಿಸರ್ಗದ ಮಧ್ಯೆ ಕುಳಿತಿದ್ದಾನೆ ಕಾಲಭೈರವೇಶ್ವರ ಸ್ವಾಮಿ. ದೇವರ ಮನೆಯಲ್ಲಿ ನೆಲೆ ನಿಂತ ಕಾಲಭೈರವೇಶ್ವರ ಕ್ಷೇತ್ರದಲ್ಲಿ ಸಾಕ್ಷಾತ್ ಪರಶಿವನೇ ಕಾಲಿಟ್ಟ ಐತಿಹ್ಯವಿದೆ. ಬೆಂಗಾಡಾಗಿದ್ದ ಈ ಸ್ಥಳ ಶಿವನ ಪಾದ ಸ್ಪರ್ಶದಿಂದ ದೇವರ ಮನೆಯಾಗಿ ಬದಲಾಯ್ತು ಎನ್ನುವ ಪೌರಾಣಿಕ ಹಿನ್ನೆಲೆ ಈ ಕಾಲಭೈರವೇಶ್ವರ ದೇವಾಲಯಕ್ಕಿದೆ