HMD Arrow: ಹೊಸ ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದೆ ಪ್ರಸಿದ್ಧ ನೋಕಿಯಾ ಸ್ಮಾರ್ಟ್​ಫೋನ್

HMD Arrow: ಹೊಸ ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದೆ ಪ್ರಸಿದ್ಧ ನೋಕಿಯಾ ಸ್ಮಾರ್ಟ್​ಫೋನ್

ಕಿರಣ್​ ಐಜಿ
|

Updated on: May 17, 2024 | 11:06 AM

ಸ್ಮಾರ್ಟ್‌ಫೋನ್‌ಗಳು ಬರಲು ಆರಂಭಿಸಿದಾಗಿನಿಂದ, ನೋಕಿಯಾ ಕ್ರೇಜ್ ಕ್ರಮೇಣ ಕೊನೆಗೊಂಡಿತು. ಒಂದು ಕಾಲದಲ್ಲಿ ವಿಶ್ವದ ಫೋನ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಅಳಿವಿನಂಚಿನಲ್ಲಿದೆ. ಇನ್ನು ಮುಂದೆ ನೋಕಿಯಾ ಹೆಸರಿನಲ್ಲಿ ಯಾವುದೇ ಹೊಸ ಸ್ಮಾರ್ಟ್​ಫೋನ್‌ಗಳು ಬರುವುದಿಲ್ಲ. ಬದಲಾಗಿ ಎಚ್‌ಎಂಡಿ ಬ್ರಾಂಡ್‌ನೊಂದಿಗೆ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅಪ್ಪಳಿಸಲಿದೆ.

ಬೇಸಿಕ್ ಫೀಚರ್ ಮೊಬೈಲ್ ಕಾಲದಲ್ಲಿ ಎಲ್ಲೆಲ್ಲೂ ನೋಕಿಯಾ ಫೋನ್‌ಗಳ ಬಗ್ಗೆಯೇ ಮಾತು ಇರುತ್ತಿತ್ತು. ಆದರೆ ಸ್ಮಾರ್ಟ್‌ಫೋನ್‌ಗಳು ಬರಲು ಆರಂಭಿಸಿದಾಗಿನಿಂದ, ನೋಕಿಯಾ ಕ್ರೇಜ್ ಕ್ರಮೇಣ ಕೊನೆಗೊಂಡಿತು. ಒಂದು ಕಾಲದಲ್ಲಿ ವಿಶ್ವದ ಫೋನ್ ಮಾರುಕಟ್ಟೆಯನ್ನು ಆಳುತ್ತಿದ್ದ ನೋಕಿಯಾ ಈಗ ಅಳಿವಿನಂಚಿನಲ್ಲಿದೆ. ಇನ್ನು ಮುಂದೆ ನೋಕಿಯಾ ಹೆಸರಿನಲ್ಲಿ ಯಾವುದೇ ಹೊಸ ಸ್ಮಾರ್ಟ್​ಫೋನ್‌ಗಳು ಬರುವುದಿಲ್ಲ. ಬದಲಾಗಿ ಎಚ್‌ಎಂಡಿ ಬ್ರಾಂಡ್‌ನೊಂದಿಗೆ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಅಪ್ಪಳಿಸಲಿದೆ. ಭಾರತದ ಮೊದಲ HMD ಬ್ರಾಂಡ್ ಫೋನ್ ಅನ್ನು ಸಹ ಘೋಷಿಸಲಾಗಿದೆ, ಅದರ ಹೆಸರು HMD ಆ್ಯರೋ ಹೆಸರಿನ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.