ಹಿಲ್ ವ್ಯೂವ್ ಪಬ್ಲಿಕ್ ಸ್ಕೂಲ್ ಹುಸಿಬಾಂಬ್ ಕರೆ: ಡಿಕೆಶಿ ಪುತ್ರಿ ಐಶ್ವರ್ಯ ಹೇಳಿದ್ದೇನು?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 18, 2022 | 2:49 PM

ಪಾಲಕರ ಮತ್ತು ಮಕ್ಕಳ ಅತಂಕವನ್ನು ಅರ್ಥ ಮಾಡಿಕೊಂಡಿದ್ದ ಐಶ್ವರ್ಯ ಮಕ್ಕಳಿಗೆ ಯಾವುದೇ ತೊಂದರೆಯಾಗದ ಹಾಗೆ ಸುರಕ್ಷಿತವಾಗಿ ಮನೆಗೆ ಕಳಿಸುವ ಜವಾಬ್ದಾರಿ ನಮ್ಮದು, ನೀವ್ಯಾರೂ ಹೆದರುವ ಅವಶ್ಯಕತೆಯಿಲ್ಲ ಎಂದು ಅವರಿಗೆ ಮನದಟ್ಟವಾಗುವಂತೆ ಹೇಳಿದರು.

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರ ಪುತ್ರಿ ಐಶ್ವರ್ಯ (Aishwarya) ಅವರಲ್ಲಿ ನಿಸ್ಸಂದೇಹಾಗಿ ನಾಯಕತ್ವದ ಗುಣಗಳಿವೆ ಮಾರಾಯ್ರೇ. ಶಿವಕುಮಾರ ಅವರ ನ್ಯಾಶನಲ್ ಹಿಲ್ ವ್ಯೂವ್ ಪಬ್ಲಿಕ್ ಸ್ಕೂಲ್ ಗೆ ಸೋಮವಾರ ಬೆಳಗ್ಗೆ ಹುಸಿಬಾಂಬ್ ಕರೆ (hoax call) ಬಂದ ನಂತರ ಅದಾಗಲೇ ಶಾಲೆಗೆ ಆಗಮಿಸಿದ್ದ ಮಕ್ಕಳು ತೀವ್ರವಾಗಿ ಆತಂಕಗೊಂಡಿದ್ದರು. ವಿಷಯ ಪಾಲಕರಿಗೂ ಗೊತ್ತಾಗಿ ಅವರೆಲ್ಲ ಗಾಬರಿಗೊಂಡು ಶಾಲೆಗೆ ಧಾವಿಸಿದರು. ಅವರ ಮತ್ತು ಮಕ್ಕಳ ಅತಂಕವನ್ನು ಅರ್ಥ ಮಾಡಿಕೊಂಡಿದ್ದ ಐಶ್ವರ್ಯ ಮಕ್ಕಳಿಗೆ ಯಾವುದೇ ತೊಂದರೆಯಾಗದ ಹಾಗೆ ಸುರಕ್ಷಿತವಾಗಿ ಮನೆಗೆ ಕಳಿಸುವ ಜವಾಬ್ದಾರಿ ನಮ್ಮದು, ನೀವ್ಯಾರೂ ಹೆದರುವ ಅವಶ್ಯಕತೆಯಿಲ್ಲ ಎಂದು ಮನದಟ್ಟವಾಗುವಂತೆ ಹೇಳಿದರು.

Published on: Jul 18, 2022 01:30 PM