‘ಕಾಂತಾರ’, ‘ಕೆಜಿಎಫ್ 2’ಗೆ ಪ್ರಶಸ್ತಿ ವಿಜಯ್ ವಿರಗಂದೂರು ಸಂತಸ ಹಂಚಿಕೊಂಡಿದ್ದು ಹೀಗೆ

‘ಕಾಂತಾರ’, ‘ಕೆಜಿಎಫ್ 2’ಗೆ ಪ್ರಶಸ್ತಿ ವಿಜಯ್ ವಿರಗಂದೂರು ಸಂತಸ ಹಂಚಿಕೊಂಡಿದ್ದು ಹೀಗೆ

ಮಂಜುನಾಥ ಸಿ.
|

Updated on:Aug 17, 2024 | 4:07 PM

National Award: ತಮ್ಮ ನಿರ್ಮಾಣದ ‘ಕಾಂತಾರ’ ಹಾಗೂ ‘ಕೆಜಿಎಫ್ 2’ ಸಿನಿಮಾಕ್ಕೆ ಏಕಕಾಲದಲ್ಲಿ ಎರಡೆರಡು ರಾಷ್ಟ್ರಪ್ರಶಸ್ತಿ ದೊರೆತ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಸಂತಸ ಹಂಚಿಕೊಂಡಿದ್ದು ಹೀಗೆ.

ರಾಷ್ಟ್ರಪ್ರಶಸ್ತಿ ಜಯಿಸುವುದೇ ಮಹಾ ಗೌರವ, ಅದರಲ್ಲಿಯೂ ಸ್ಪರ್ಧೆಗೆ ಬಂದ ನೂರಾರು ಸಿನಿಮಾಗಳಲ್ಲಿ ತಮ್ಮ ನಿರ್ಮಾಣದ ಸಿನಿಮಾಗಳು ಮಾತ್ರವೇ ಪ್ರಶಸ್ತಿ ಜಯಿಸುವುದೆಂದರೆ ಅದರ ಖುಷಿಯೇ ಬೇರೆ. ಅಂಥಹಾ ಒಂದು ಖುಷಿಯನ್ನು, ಸಂತಸವನ್ನು ನಿರ್ಮಾಪಕ ವಿಜಯ್ ಕಿರಗಂದೂರು ಅನುಭವಿಸುತ್ತಿದ್ದಾರೆ. ನಿನ್ನೆಯಷ್ಟೆ ಘೋಷಣೆಯಾದ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯಲ್ಲಿ ತಮ್ಮ ಫೀಚರ್ ವಿಭಾಗದಲ್ಲಿ ಅಂದರೆ ಚಲನಚಿತ್ರ ವಿಭಾಗದಲ್ಲಿ ಹೊಂಬಾಳೆ ನಿರ್ಮಿಸಿದ ಕನ್ನಡ ಸಿನಿಮಾಗಳು ಮಾತ್ರವೇ ಪ್ರಶಸ್ತಿಗೆ ಭಾಜನವಾಗಿವೆ. ಹೊಂಬಾಳೆ ನಿರ್ಮಿಸಿರುವ ‘ಕಾಂತಾರ’ ಸಿನಿಮಾಕ್ಕೆ ಎರಡು ಪ್ರಶಸ್ತಿ ಹಾಗೂ ‘ಕೆಜಿಎಫ್ 2’ ಸಿನಿಮಾಕ್ಕೆ ಎರಡು ಪ್ರಶಸ್ತಿ ಲಭ್ಯವಾಗಿದೆ. ತಮ್ಮ ನಿರ್ಮಾಣ ಸಂಸ್ಥೆಯ ಸಿನಿಮಾ ಪ್ರಶಸ್ತಿ ಗೆದ್ದ ಖುಷಿಯನ್ನು ವಿಜಯ್ ಕಿರಗಂದೂರು ಟಿವಿ9 ಜೊತೆಗೆ ಹಂಚಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Aug 17, 2024 01:43 PM