ಕಾಲುಜಾರಿ ತುಂಗಭದ್ರ ನದಿಗೆ ಬಿದ್ದ ಮಹಿಳೆ, ಜಾಗರೂಕ ಹೋಮ್ಗಾರ್ಡ್ನಿಂದ ರಕ್ಷಣೆ
ಈ ಭಾಗದಲ್ಲಿ ಸತತವಾಗಿ ಮಳೆಯಾಗುತ್ತಿರುವುದರಿಂದ ತುಂಗಭದ್ರ ನದಿ ತುಂಬಿ ಹರಿಯುತ್ತಿದೆ ಮತ್ತು ಭರ್ತಿಯಾಗಿರುವ ತುಂಗಭದ್ರ ಜಲಾಶದಿಂದ ನೀರನ್ನು ಪುನಃ ನದಿಗೆ ಹರಿಬಿಡಲಾಗುತ್ತಿದೆ. ಪ್ರವಾಸಿಗರು ನದಿಗೆ ಇಳಿಯಬಾರದೆಂದು ಸೂಚನೆ ನೀಡಿದ್ದರೂ ಜನ ತಮ್ಮ ಮೊಂಡುತನ ಸಾಧಿಸಿ ನೀರಿಗಿಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಅನಾಹುತಗಳು ನಡೆದು ಹೆಚ್ಚುಕಡಿಮೆಯಾದರೆ ಜಿಲ್ಲಾಡಳಿತವನ್ನೇ ದೂಷಿಸಲಾಗುತ್ತದೆ.
ಬಳ್ಳಾರಿ, ಜುಲೈ 7: ಇದನ್ನೇ ನಾವು ಬೇಡ ಅನ್ನುತ್ತಿರೋದು. ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿರುವ ಹಂಪಿಗೆ ಪ್ರವಾಸಕ್ಕೆಂದು ಬಂದ ಕುಟುಂಬದ ಸದಸ್ಯೆಯೊಬ್ಬರು ತುಂಗಭದ್ರ ನದಿಯ ಸ್ನಾನಘಟ್ಟದ ಬಳಿ ಸ್ನಾನಕ್ಕೆಂದು ಹೋದಾಗ ಕಾಲುಜಾರಿ ನದಿಗೆ ಬಿದ್ದಿದ್ದಾರೆ. ಅದೃಷ್ಟಕ್ಕೆ ಕಾವಲು ಕಾಯುತ್ತಿದ್ದ ಹೋಮ್ ಗಾರ್ಡ್, ಮಹಿಳೆ ನದಿಗೆ ಬೀಳುವುದನ್ನು ಗಮನಿಸಿದ್ದಾರೆ. ಅವರ ಸಮಯ ಪ್ರಜ್ಞೆಯಿಂದಾಗಿ ಮಹಿಳೆಯ ಪ್ರಾಣ ಉಳಿದಿದೆ. ಸ್ನಾನಘಟ್ಟದ ಬಳಿ ಕಟ್ಟೆಯೊಂದರ ಮೇಲೆ ಮಹಿಳೆ ಕೂತು ತಮ್ಮ ಅದೃಷ್ಟ ನೆನೆದು ತಾವು ನಂಬಿದ ದೇವರಿಗೆ ಮತ್ತು ಪ್ರಾಣ ಕಾಪಾಡಿದ ಹೋಮ್ಗಾರ್ಡ್ಗೆ ಕೃತಜ್ಞತೆ ಸಲ್ಲಿಸುತ್ತಿರುವುದನ್ನು ನೋಡಬಹುದು.
ಇದನ್ನೂ ಓದಿ: ಬರ್ತ್ಡೇ ದಿನವೇ ಸೇಹಿತರ ದುರಂತ ಅಂತ್ಯ: ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ನೀರುಪಾಲು
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ